ಕಾರ್ಕಳ : ಮನೆಯಂಗಳದಲ್ಲಿದ್ದ ಸ್ಕೂಟಿ ಕಳವಾದ ಘಟನೆ ಫೆ. 12ರಂದು ಸಾಣೂರಿನಲ್ಲಿ ನಡೆದಿದೆ. ಮೋಂತಿ ವಿಲಿಯಂ ಡಿʻಸೋಜಾ ಅವರ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟಿ (KA20HG2061) ಯನ್ನು ಕಳ್ಳರು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 2.30ರ ಮದ್ಯಾವಧಿಯಲ್ಲಿ ಕಳವು ಮಾಡಿದ್ದಾರೆ. ಸ್ಕೂಟಿಯ ಅಂದಾಜು ಮೌಲ್ಯ ರೂ. 75,000/- ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮನೆಯಂಗಳದಲ್ಲಿದ್ದ ಸ್ಕೂಟಿ ಕಳವು



















