ಕಾರ್ಕಳ : ಮಕ್ಕಳಿಗೆ ಇನ್ನೊಬ್ಬರ ಆದರ್ಶದ ಬಗ್ಗೆ ತಿಳಿಸುವ ಬದಲು ಹೆತ್ತವರೇ ಆದರ್ಶಯುತ ಜೀವನ ನಡೆಸಬೇಕು. ಮಕ್ಕಳು ಮೊದಲು ಮನೆಮಂದಿಯನ್ನೇ ಅನುಸರಿಸುತ್ತಾರೆ ಎಂದು ಕಟಪಾಡಿ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಹೇಳಿದರು.
ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಫೆ. 8 ರಂದು ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ರಜತ ಸಂಭ್ರಮ ಹಾಗೂ ಸಾಮೂಹಿಕ ಬ್ರಹ್ಮೋಪದೇಶ ಪ್ರಯುಕ್ತ ಜರುಗಿದ ಧಾರ್ಮಿಕ ಸಭೆಯನ್ನುದ್ಧೇಶಿಸಿ ಅವರು ಆಶೀರ್ವಚನ ನೀಡಿದರು.
ಹೆತ್ತವರು ಹುಟ್ಟಿದ ಮಗನಿಗೆ ಉಪನಯನ ಮಾಡುವ ಜವಾಬ್ದಾರಿಯನ್ನು ಮರೆಯಬಾರದು. ಸಾಮೂಹಿಕ ಆಚರಣೆಯಿಂದ ಸುಲಭವಾಗಿ ದೇವರ ಅನುಗ್ರಹ ಪ್ರಾಪ್ತಿಯಾಗುವುದು ಎಂದರು.
ಚಿನ್ನ ಬೆಳ್ಳಿ ಕೆಲಸಗಾರರು ವೃತ್ತಿಯಲ್ಲಿ ಆಧುನೀಕತೆಯನ್ನು ಬಳಸಿಕೊಂಡಾಗ ಯಶಸ್ಸು ಸಾಧಿಸಲು ಅನುಕೂಲವಾಗುವುದು. ಸಮಾಜದಲ್ಲಿ, ಸಂಘ ಸಂಸ್ಥೆಗಳಲ್ಲಿ ಧನಾತ್ಮಕ – ಋಣತ್ಮಕವಾಗಿ ಮಾತನಾಡುವವರು ಸರ್ವೇ ಸಾಮಾನ್ಯ. ನಮ್ಮನ್ನು ಹೊಗಳುವವರು, ಪ್ರೀತಿಸುವವರು, ಆತ್ಮೀಯತೆಯಿಂದ ನೊಡಿಕೊಳ್ಳುವವರಿಂದ ನಾವು ಸುಖವಾಗಿ ಇರಬಹುದು. ಆದರೆ, ನಮ್ಮನ್ನು ಟೀಕಿಸುವವರು, ತೇಗುಳುವವರು ಮಾತ್ರ ನಮ್ಮನ್ನು ಬೆಳೆಸುತ್ತಾರೆ ಎಂದರು.

ರಾಜಕೀಯವಾಗಿ ನಾವು ಯಾವುದೇ ಪಕ್ಷದ ಬ್ರ್ಯಾಂಡ್ ಆಗಬಾರದು. ಹಾಗೆ ಆದಲ್ಲಿ ಅವರು ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಾರೆ. ಯಾವುದೇ ಪಕ್ಷಕ್ಕೆ ಸೀಮಿತವಾಗಿರದೇ ಸಹಕಾರ ನೀಡುವ ಪಕ್ಷದೊಂದಿಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದು ಸ್ವಾಮೀಜಿ ಹೇಳಿದರು.

ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಎಂ. ರಮೇಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಪಿ., ಕೋಟೇಶ್ವರ ರಥಶಿಲ್ಪಿ ರಾಜಗೋಪಾಲ ಆಚಾರ್ಯ, ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಿಲ್ಪಿ ರಾಮಚಂದ್ರ ಆಚಾರ್ಯ, ಮಂಗಳೂರು ವಿಶ್ವಕರ್ಮ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಡಾ. ಎಸ್.ಆರ್. ಹರೀಶ್ ಆಚಾರ್ಯ, ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಸಂಘದ ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಾಳಿ, ಪೆರ್ವಾಜೆ ವಿ.ಬಿ.ಎಸ್. ಸಭಾ ಕಾರ್ಕಳ ಇದರ ಅಧ್ಯಕ್ಷ ಬಿ. ಪ್ರಕಾಶ್ ಆಚಾರ್ಯ, ಮುಂಬೈ ಉದ್ಯಮಿ ಶೇಖರ ಆಚಾರ್ಯ, ಕಾರ್ಕಳ ಉಷಾ ಜ್ಯುವೆಲ್ಲರ್ಸ್‌ನ ಮಾಲಕ ಅಮಿತ್, ದ.ಕ. ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಕೆ. ಎಲ್. ಹರೀಶ್, ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಜೊತೆ ಮೊಕ್ತೇಸರರಾದ ಪಿ. ರವಿ ಆಚಾರ್ಯ ಪೆರ್ವಾಜೆ, ಸುರೇಶ್ ಆಚಾರ್ಯ ನಿಟ್ಟೆ, ಕುಂದಾಪುರ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಬಿ. ಕುಶ ಕುಮಾರ್, ಕಾರ್ಕಳ ಕರ್ನಾಟಕ ಜ್ಯುವೆಲ್ಲರ್ಸ್‌ನ ಮಾಲಕರು ಹರ್ಷವರ್ಧನ ಆಚಾರ್ಯ, ಚಿನ್ನ ಬೆಳ್ಳಿ ಕೆಲಸಗಾರರ ಹಿತರಕ್ಷಣಾ ವೇದಿಕೆ ಮೂಡುಬಿದಿರೆ ಇದರ ಅಧ್ಯಕ್ಷ ನವೀನ್ ಆಚಾರ್ಯ, ಕೆ. ಕರುಣಾಕರ ಆಚಾರ್ಯ ಸಾಲ್ಮರ, ಕಾರ್ಕಳ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಗೌರವಾಧ್ಯಕ್ಷ ಕೆ. ಕಿಶೋರ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲೋಹ ಶಿಲ್ಪಿ ದಾಮೋದರ ಆಚಾರ್ಯ ಬೈಲೂರು, ಸ್ವರ್ಣ ಶಿಲ್ಪಿ ಶ್ಯಾಮರಾಯ ಆಚಾರ್ಯ ಜಾರ್ಕಳ, ಕಾಷ್ಠ ಶಿಲ್ಪಿ ಪದ್ಮನಾಭ ಆಚಾರ್ಯ ಸಾಣೂರು, ಶಿಲಾ ಶಿಲ್ಪಿ ಪ್ರಕಾಶ ಆಚಾರ್ಯ ಕುಕ್ಕುಂದೂರು, ಎರಕ ಶಿಲ್ಪಿ ಪ್ರಕಾಶ ಆಚಾರ್ಯ ಆನೆಕೆರೆ, ರಂಗೋಲಿಯಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಮಾಡಿರುವ ಕಲಾವಿದರಾದ ಸೂರ್ಯ ಪುರೋಹಿತ್, ಪೆನ್ಸಿಲ್ ಲೆಡ್ ಸೂಕ್ಷ್ಮ ಕಲಾವಿದ ಗಿನ್ನೆಸ್ ವಿಶ್ವದಾಖಲೆ ಮಾಡಿರುವ ಸುರೇಂದ್ರ ಆಚಾರ್ಯ ನೂರಾಳ್‌ಬೆಟ್ಟು, ಸಮಾಜ ಸೇವೆಗಾಗಿ ಪದ್ಮನಾಭ ಆಚಾರ್ಯ ಪೆರ್ವಾಜೆ, ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾದ ಅನುಶ್ರೀ ರಿಷಬ್ ಆಚಾರ್ಯ ನಿಟ್ಟೆ, ಕು| ಲಾವಣ್ಯ ಯು.ಕೆ., ಇವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಸಂಘದ ಅಧ್ಯಕ್ಷ ದಂಪತಿಗಳನ್ನು ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವತಿಯಿಂದ ಮತ್ತು ನೆಕ್ಲಾಜೆ ಕ್ಷೇತ್ರದ ವತಿಯಿಂದ ಗೌರವ ಸಮರ್ಪಿಸಲಾಯಿತು.
ಗೌರವ ಸಲಹೆಗಾರರಾದ ಕೆ. ಸುಧಾಕರ ಆಚಾರ್ಯ ಸ್ವಾಗತಿಸಿದರು, ಕೆ. ರತ್ನಾಕರ ಆಚಾರ್ಯ ಕಟ್ಟಿಮಾರ್ ಪ್ರಾಸ್ತವನೆ ಗೈದರು. ಗೀತಾ ಚಂದ್ರ ಆಚಾರ್ಯ ಮತ್ತು ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಂತೋಷ್ ಆಚಾರ್ಯ ವಂದಿಸಿದರು.
ಸಮಾಜ ಬಾಂಧವರಿಂದ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬ್ರಾಹ್ಮಿ ಯಕ್ಷಕಲಾವೃಂದ ಹೆನ್ನಾಬೈಲ್ ಕುಂದಾಪುರ ಕಲಾವಿದರಿಂದ ರಾಜಾ ರುದ್ರ ಕೋಪ ಯಕ್ಷಗಾನ ಪ್ರದರ್ಶನಗೊಂಡಿತು.




















