ಕಾರ್ಕಳ : ಕಾರ್ಕಳ ಗಾಂಧಿಮೈದಾನದಲ್ಲಿ ಜ. 30ರಿಂದ ಫೆ. 1ರವರೆಗೆ ಭಾರತ್ ಜೋಡೋ ಟ್ರೋಫಿ -2026 ಕ್ರಿಕೆಟ್ ಪಂದ್ಯಾಟ ನಡೆಯಲಿದೆ. ಸೌಹಾರ್ದತೆಗಾಗಿ ಕ್ರಿಕೆಟ್ ಅನ್ನುವ ಧ್ಯೇಯದೊಂದಿಗೆ ಜ.30, 31 ಹಾಗೂ ಫೆ. 1 ರಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ ಸಾರಥ್ಯದಲ್ಲಿ ಕಾರ್ಕಳ ನಗರ ಯುವ ಕಾಂಗ್ರೆಸ್ ಹಾಗೂ ಕಾರ್ಕಳ ಎನ್.ಎಸ್.ಯು.ಐ. ಸಹಭಾಗಿತ್ವದಲ್ಲಿ ರಾಹುಲ್ ಗಾಂಧಿ ಅವರು ನಡೆಸಿದ ಭಾರತ್ ಜೋಡೋ ಯಾತ್ರೆಯ ಸವಿನೆನಪಿಗಾಗಿ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ. ಶುಕ್ರವಾರ ಸಂಜೆ 6 ಗಂಟೆಗೆ ಕಾಂಗ್ರೆಸ್ ಜಿಲ್ಲಾ ಜಿಲ್ಲಾ ಉಪಾಧ್ಯಕ್ಷ ಶೇಖರ್ ಮಡಿವಾಳ್ ಸಭಾ ಕಾರ್ಯಕ್ರಮ ಉದ್ಘಾಟಿಸಲಿವರು. ಸಮಾರಂಭದಲ್ಲಿ ಜನಪ್ರತಿನಿಧಿಗಳು, ಉಡುಪಿ, ದ.ಕ., ಜಿಲ್ಲಾ ಕಾಂಗ್ರೆಸ್ ಮಖಂಡರು, ಕಾರ್ಕಳ ಹೆಬ್ರಿ ತಾಲೂಕಿನ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಕಳದಲ್ಲಿ ಭಾರತ್ ಜೋಡೋ ಟ್ರೋಫಿ – ಸೌಹಾರ್ದತೆಗಾಗಿ ಕ್ರಿಕೆಟ್






























































