ಬಾವಿಗೆ ಬಿದ್ದ ವೃದ್ಧ ವ್ಯಕ್ತಿಯ ರಕ್ಷಣೆ

ಕಾರ್ಕಳ : ಬಾವಿಗೆ ಬಿದ್ದ ವೃದ್ಧ ವ್ಯಕ್ತಿಯನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ ಘಟನೆ ಜ. 8ರಂದು ನಕ್ರೆಯಲ್ಲಿ ನಡೆದಿದೆ. ನಕ್ರೆ ದೇವರಗುಡ್ಡೆಯ ಚಂದು ಅವರಿಗೆ ಪ್ಯಾರಲಿಸ್‌ನಿಂದಾಗಿ ಕೈ ಕಾಲುಗಳಲ್ಲಿ ಬಲಹೀನತೆಯಿದ್ದು ಆಕಸ್ಮಿಕವಾಗಿ 30 ಅಡಿಯ ಬಾವಿಗೆ ಬಿದ್ದಿರುತ್ತಾರೆ. ತಕ್ಷಣವೇ ಮನೆಯವರು ಕಾರ್ಕಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಚಂದು ಅವರನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿ ಹರಿಪ್ರಸಾದ್, ಮುಝಾಂಬಿಲ್‌, ದಿನೇಶ್ ಹಾಗೂ ಗಣೇಶ್ ಪಾಲ್ಗೊಂಡಿದ್ದರು.









































































































error: Content is protected !!
Scroll to Top