ಕಾರ್ಕಳ : ಸಾಣೂರು ಮುರತ್ತಂಗಡಿ ಶ್ರೀ ಭಕ್ತ ವತ್ಸಲ ಅಯ್ಯಪ್ಪ ಸೇವಾ ಸಮಿತಿಯ ಆಶ್ರಯದಲ್ಲಿ 14ನೇ ವರ್ಷದ ಮಹಾಪೂಜೆ ಜ.10 ರಂದು ಜರುಗಲಿದೆ. ಶಿವಾನಂದ ಶಾಂತಿ ಮೂಡಬಿದಿರೆ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು, ಬೆಳಿಗ್ಗೆ 7.30ರಿಂದ ಸ್ವಾಮಿಗಳು ಇರುಮುಡಿ ಕಟ್ಟುವುದು, 10 ಗಂಟೆಗೆ ಭಜನಾ ಕಾರ್ಯಕ್ರಮ, 12 ಗಂಟೆಗೆ ಮಹಾಪೂಜೆಯಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ಕುಣಿತ ಭಜನೆ, 6.30ರಿಂದ ಅಯ್ಯಪ್ಪ ದೇವರಿಗೆ ದೀಪಾರಾಧನೆ ನೆರವೇರಲಿದೆ.
ಸಭಾ ಕಾರ್ಯಕ್ರಮ
ಸಭಾ ಕಾರ್ಯಕ್ರಮದಲ್ಲಿ ಸಾಣೂರು ದೇಂದಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀರಾಮ್ ಭಟ್, ನಮ್ಮ ಕುಡ್ಲ ಚಾನೆಲ್ ಸಿಇಓ ಕದ್ರಿ ನವನೀತ್ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ ಸತೀಶ್ ಶೆಟ್ಟಿ ಪಟ್ಲ, ಸಾಣೂರು ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಸಾಣೂರು ಗ್ರಾ. ಪಂ. ಅಧ್ಯಕ್ಷ ಯುವರಾಜ್ ಜೈನ್, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ತಂತ್ರಿಯವರಾದ ಶಿವಾನಂದ ಶಾಂತಿ, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ. ಶೆಟ್ಟಿ, ಆಳ್ವಾಸ್ ಕಾಲೇಜು ಮೂಡಬಿದಿರೆ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ, ರಂಗಭೂಮಿ ಮತ್ತು ಚಲನಚಿತ್ರ ನಟರಾದ ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ರಾಮಕೃಷ್ಣ ಗುರುಸ್ವಾಮಿ ನಾಂದೇಡ್ ಲಾತೂರ್ ಉಪಸ್ಥಿತರಿರಲಿದ್ದಾರೆ.
ಸನ್ಮಾನ
ಕಾರ್ಯಕ್ರಮದಲ್ಲಿ ಸಾಣೂರು ಪ್ರೌಢಶಾಲಾ ವಿಭಾಗದ ನಿವೃತ್ತ ಶಿಕ್ಷಕ ಬಿ. ವಿ. ಗುಂಡಪ್ಪ, ಯಕ್ಷಗಾನ ಗುರು ಮಹಾವೀರ ಪಾಂಡಿ, ದೈವಾರಾಧಕರಾದ ರಮೇಶ್ ಪೂಜಾರಿ ಮತ್ತು ಉಮೇಶ್ ಪೂಜಾರಿ, ಯುವ ವೈದ್ಯ ಪ್ರಸಾದ್ ವಸಂತ್ ಆಚಾರ್ಯ ಅವರನ್ನು ಸನ್ಮಾನಿಸಲಾಗುವುದು ಮತ್ತು 50ನೇ ವರ್ಷದ ಶಬರಿಮಲಾ ಯಾತ್ರಿಕರಾದ ಸದಾಶಿವ ಬಿಲ್ಲವ ಗುರುಸ್ವಾಮಿ ಮತ್ತು 18ನೇ ವರ್ಷದ ಶಬರಿಮಲಾ ಯಾತ್ರಿಕರಾದ ಪ್ರಕಾಶ್ ಶೆಟ್ಟಿಯವರಿಗೆ ವಿಶೇಷ ಗೌರವಾರ್ಪಣೆ ನಡೆಯಲಿದೆ. ನಿತೇಶ್ ಶೆಟ್ಟಿ ಎಕ್ಕಾರು ಮತ್ತು ಮೋಹನ್ ಶೆಟ್ಟಿ ಸಾಣೂರು ಕಾರ್ಯಕ್ರಮ ನಿರೂಪಿಸಲಿದ್ದಾರೆ.

ಶನಿ ಮಹಾತ್ಮೆ
ರಾತ್ರಿ 8 ಗಂಟೆಯಿಂದ ಶ್ರೀ ಲಲಿತೆ ಕಲಾವಿದರು ಮಂಗಳೂರು ಇವರಿಂದ ಪಟ್ಲ ಭಾಗವತರ ದೀಪಕಮಲಾ ಹಾಡಿನೊಂದಿಗೆ ಲಯನ್ ಕಿಶೋರ್ ಡಿ. ಶೆಟ್ಟಿ ನಿರ್ಮಾಣದ ಕದ್ರಿ ನವನೀತ್ ಶೆಟ್ಟಿ ರಚನೆ ಮತ್ತು ಸಾಹಿತ್ಯದ ಪೌರಾಣಿಕ ತುಳು ನಾಟಕ ಶನಿ ಮಹಾತ್ಮೆ ಪ್ರದರ್ಶನಗೊಳ್ಳಲಿದೆ ಎಂದು ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.








