ಶಾಸಕಿ ಭಾಗೀರಥಿ ಮುರುಳ್ಯ ಕುರಿತು ಫೇಸ್ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌

ಕಾರ್ಕಳ : ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕಿ ಭಾಗೀರಥಿ ಮುರುಳ್ಯ ಅವರ ಬಗ್ಗೆ ಪೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿರುವ ವ್ಯಕ್ತಿಯನ್ನು ಬಂಧಿಸುವಂತೆ ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಉಪಾಧ್ಯಕ್ಷ ಶ್ರೀನಿವಾಸ್ ಕಾರ್ಲಾ ಆಗ್ರಹಿಸಿದ್ದಾರೆ.

ಬಿಲ್ಲವ ಸಂದೇಶ್ ಎನ್ನುವ ಬೀದಿ ನಾಯಿಯೊಬ್ಬ ತನ್ನ ಫೇಸ್‌ಬುಕ್‌ನಲ್ಲಿ ದಲಿತ ಸಮುದಾಯದ ಅದರಲ್ಲೂ ಯಾವುದೆ ರಾಜಕಾರಣದ ಹಿನ್ನಲೆ ಇಲ್ಲದೆ ಅತ್ಯಂತ ಕಡು ಕುಟುಂಬದಲ್ಲಿ ಹುಟ್ಟಿ ಯಾವುದೇ ಹಗರಣ ಮಾಡದೆ ತಾವಾಯ್ತು ತಮ್ಮ ಕೆಲಸವಾಯ್ತು ಅಂತ ಇರುವ ಸುಳ್ಯದ ಬಿಜೆಪಿ ದಲಿತ ಶಾಸಕಿ ಭಾಗಿರಥಿ ಮುರುಳ್ಯರವರನ್ನು ಜೀವಂತ ಇರುವಾಗಲೆ ಅವರು ಸತ್ತುಹೋಗಿದ್ದಾರೆ ಎಂದು ಟ್ರೋಲ್ ಮಾಡಿ ಶ್ರದ್ಧಾಂಜಲಿ ಸಲಿಸುತ್ತಾನೆ ಅಂದರೆ ಈತನಿಗೆ ಯಾವ ಪರಿ ಅಹಂಕಾರ ಇರಬಹುದು ಎಂದು ಆಕ್ರೋಶ ವ್ಯಕ್ತಪಡಿಸಿರುವ ಶ್ರೀನಿವಾಸ್‌ ಕಾರ್ಲಾ ದಲಿತ ಸಮುದಾಯಕ್ಕೆ ಸೇರಿದವರು ಹಾಗೂ ಮಹಿಳೆ ಎಂಬ ಕಾರಣಕ್ಕೆ ಈ ರೀತಿ ಅವರ ಬಗ್ಗೆ ಬರೆದು ಹಾಕುವುದು ಖಂಡನೀಯ. ಭಾಗೀರಥಿ ಅವರು ತಾಯಿಗೆ ಸಮಾನ. ಅವರನ್ನು ಅವಮಾನ ಮಾಡುವುದು ಅಕ್ಸಮ್ಯ ಅಪರಾಧ. ನಮ್ಮ ಆದಿ ದ್ರಾವಿಡ ಸಮುದಾಯ ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಅವನು ಯಾರೇ ಆಗಿರಲಿ, ತಕ್ಷಣ ಅವನ ಮೇಲೆ F.I.R ಮಾಡಿ ಬಂಧಿಸುವಂತೆ ಆಗ್ರಹಿಸಿದ್ದಾರೆ.















error: Content is protected !!
Scroll to Top