ಕಾರ್ಕಳ : ನೀರೆ ದೇಲೊಟ್ಟು ಬ್ರಹ್ಮ ಮುಗೇರ್ಕಳ ದೈವಸ್ಥಾನದಲ್ಲಿ ದೈವ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ ವಾರ್ಷಿಕ ನೇಮೋತ್ಸವ ಎ. 13ರಿಂದ 16ರವರೆಗೆ ನಡೆಯಲಿದೆ. ಬ್ರಹ್ಮಶ್ರೀ ಜಾರ್ಕಳ ಪ್ರಸಾದ್ ತಂತ್ರಿಯವರ ಉಪಸ್ಥಿತಿಯಲ್ಲಿ ವೇ. ಮೂ. ಲಕ್ಷ್ಮೀ ನಾರಾಯಣ ಭಟ್ ಹಾಗೂ ಲಕ್ಷ್ಮೀ ಪ್ರಸಾದ್ ಭಟ್ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ.
ಎ. 13ರಂದು ಸಂಜೆ 5 ಗೇಹ ಪ್ರತಿಗ್ರಹ, ಭಂಡಾರ ತರುವುದು, ದೇವತಾ ಪ್ರಾರ್ಥನೆಯೊಂದಿಗೆ ವಿವಿಧ ಪೂಜಾ ಕಾರ್ಯಗಳು ನಡೆಯಲಿದೆ. ಎ. 14ರಂದು ಬೆಳಗ್ಗೆ 7.30ರಿಂದ ಸಪರಿವಾರ ಬ್ರಹ್ಮದೇವರ ನೂತನ ಆಲಯ ಸಮರ್ಪಣಾ ಪೂರ್ವಕ ಪುನಃ ಪ್ರತಿಷ್ಠೆ, ಕಲಶಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಕ್ಷೇತ್ರದ ಪುನರ್ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಿಗೆ ಗೌರವಾರ್ಪಣೆ, ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಎ. 15ರಂದು ಮಧ್ಯಾಹ್ನ 12 ಗಂಟೆಯಿಂದ ಸ್ಥಳೀಯರಿಂದ ಭಜನಾ ಕಾರ್ಯಕ್ರಮ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ಧರ್ಮರಸು ಹಾಗೂ ಸ್ಥಳ ವಾರಾಹಿ ದೈವಗಳ ನೇಮ, ರಾತ್ರಿ 9 ಗಂಟೆಗೆ ಮುಗೇರ್ಕಳ ಮತ್ತು ತನಿಮನಿಗ ದೈವದ ಸಿರಿ ಸಿಂಗಾರದ ನೇಮೋತ್ಸವ. ಎ. 16ರಂದು ಬೆಳಗ್ಗೆ 11.30ಕ್ಕೆ ಅಲೇರ ಪಂಜುರ್ಲಿ ದೈವದ ನೇಮ ನಡೆದು ನಂತರ ಭಂಡಾರ ಹಿಂತಿರುಗಲಿದೆ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.
ನ್ಯೂಸ್ ಕಾರ್ಕಳದಲ್ಲಿ ನೇಮೋತ್ಸವದ ನೇರಪ್ರಸಾರ ನಡೆಯಲಿದೆ.























