ದುಬೈ-ಬಹ್ರೇನ್ ಡೇಟಾ ಸೆಂಟರ್ ಮೇಲೆ ಇರಾನ್ ದಾಳಿ

ದುಬೈ : ಇರಾನ್ ವೈಮಾನಿಕ ದಾಳಿಯ ಅನಂತರ ದುಬೈ ಮತ್ತು ಬಹ್ರೇನ್ ನಲ್ಲಿರುವ ಅಮೆಜಾನ್ ವೆಬ್ ಸರ್ವೀಸ್ (AWS) ಕೇಂದ್ರಗಳಲ್ಲಿನ ಸೇವೆಯಲ್ಲಿ ವ್ಯತ್ಯಯವಾಗಿದೆ ಎಂದು ಅಮೆಜಾನ್ ಹೇಳಿದೆ.
ಗಲ್ಫ್ ರಾಷ್ಟ್ರಗಳಲ್ಲಿನ ಬಹುರಾಷ್ಟ್ರೀಯ ಕಂಪೆನಿಯನ್ನು ಟಾರ್ಗೆಟ್ ಮಾಡಲಾಗುವುದು ಎಂದು ಈ ಹಿಂದೆ ಇರಾನ್ ಎಚ್ಚರಿಕೆಯನ್ನು ನೀಡಿತ್ತು. ವೈಮಾನಿಕ ದಾಳಿಯನ್ನು ಒಪ್ಪಿಕೊಂಡ ಅಮೆಜಾನ್ ಆಂತರಿಕ ಮೆಮೋದ ಪ್ರಕಾರ ಇರಾನ್ ದಾಳಿಯ ಹಾನಿ ಪ್ರಮಾಣದಿಂದಾಗಿ, ಈ ಪ್ರದೇಶಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡದಂತೆ ಅಮೆಜಾನ್ ತನ್ನ ಉದ್ಯೋಗಿಗಳಲ್ಲಿ ಕೇಳಿಕೊಂಡಿದೆ. ದುಬೈ ಮತ್ತು ಬಹ್ರೇನ್ ನಲ್ಲಿರುವ ಈ ಎರಡು ಡೇಟಾ ಸೆಂಟರ್ ಗಳು ದಾಳಿಯಿಂದ ದುರ್ಬಲಗೊಂಡಿದೆ. ಸಾಮಾನ್ಯ ಮಟ್ಟದ ಸೇವೆಯನ್ನು ಮತ್ತೆ ನೀಡಲು ಪ್ರಯತ್ನಿಸುತ್ತಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸುವ ಬಗ್ಗೆ ಸದ್ಯ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಬಾರದು ಎಂದು ಅಮೆಜಾನ್ ತಿಳಿಸಿದೆ.
ಐಆರ್‌ಜಿಸಿ, ಮೈಕ್ರೋಸಾಪ್ಟ್, ಗೂಗಲ್, ಆಪಲ್ ನಂತಹ ದೈತ್ಯ ಬಹುರಾಷ್ಟ್ರೀಯ ಕಂಪೆನಿಗಳು ಸೇರಿದಂತೆ, ಹಲವಾರು ಯುಎಸ್ ಟೆಕ್ ಕಂಪೆನಿಗಳ ಮೇಲೆ ದಾಳಿ ಮಾಡುವ ಬೆದರಿಕೆಯನ್ನು ಇರಾನ್ ಹಾಕಿತ್ತು.











































































error: Content is protected !!
Scroll to Top