ಹೆಬ್ರಿ ಕುಲಾಲ ಸಂಘ : ವಾರ್ಷಿಕ ಮಹಾಸಭೆ – ಬೈಕ್‌ ರ‍್ಯಾಲಿ

ಹೆಬ್ರಿ : ಕುಲಾಲ ಸಂಘ ಹೆಬ್ರಿ ತಾಲೂಕು ಇದರ ವಾರ್ಷಿಕ ಮಹಾಸಭೆ ಮತ್ತು ವಿದ್ಯಾಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮ ಡಿ. 21ರಂದು ಹೆಬ್ರಿ ಚೈತನ್ಯ ಸಭಾಭವನದಲ್ಲಿ ನಡೆಯಿತು. ಭೋಜ ಕುಲಾಲ್ ಬೇಳಂಜೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಮುದಾಯದ ಜನತೆಯ ಪ್ರಗತಿಗಾಗಿ ಸಂಘದ ನೇತೃತ್ವದಲ್ಲಿ ನಿರಂತರವಾಗಿ ವಿವಿಧ ಕಾರ್ಯಕ್ರಮಗಳು ನಡೆಯುತ್ತದೆ. ಸಂಘಕ್ಕಾಗಿ ಸ್ವಂತ ನಿವೇಶನದ ಅಗತ್ಯವಿದೆ ಎಂದರು.

ಬೈಕ್‌ ರ‍್ಯಾಲಿ
ಸಭಾ ಕಾರ್ಯಕ್ರಮಕ್ಕೂ ಮೊದಲು ವಾರ್ಷಿಕ ಮಹಾಸಭೆಯ ಪ್ರಯುಕ್ತ ಬಂಟರ ಭವನದಿಂದ ಚೈತನ್ಯ ಸಭಾಭವನದವರೆಗೆ ಬೈಕ್‌ ರ‍್ಯಾಲಿ ನಡೆಯಿತು. ಕಾರ್ಕಳ ವಲಯ ಆರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ರ‍್ಯಾಲಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ವಿಶೇಷ ಸಾಧಕರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಮಂಜುನಾಥ್ ಕುಲಾಲ್ ಅನಿಸಿಕೆ ವ್ಯಕ್ತಪಡಿಸಿದರು. ಐತು ಕುಲಾಲ್ ಮಾತನಾಡಿ, ಸಮುದಾಯದ ಶೈಕ್ಷಣಿಕ ಪ್ರಗತಿಗಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುತ್ತಿರುವುದು ಶ್ಲಾಘನೀಯ ಎಂದರು. ಹರಿಶ್ಚಂದ್ರ ಕುಲಾಲ್ ಕಾರ್ಕಳ ಮಾತನಾಡಿ, ನಾವೆಲ್ಲರೂ ಜೊತೆಯಾದ ನಮ್ಮ ಸಂಸ್ಥೆ ಅಭಿವೃದ್ಧಿಯಾಗುತ್ತದೆ. ತನ್ಮೂಲಕ ಸಮುದಾಯ ಅಭಿವೃದ್ಧಿ ಸಾಧ್ಯ ಎಂದರು.
ಸುರೇಂದ್ರ ಕುಲಾಲ್ ವರಂಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಜೇತ್ ಕುಲಾಲ್, ರಮೇಶ್ ಕುಲಾಲ್ , ವಾಸುದೇವ ಕುಲಾಲ್ ಶಿವಪುರ, ಸೀತಾರಾಮ್ ಕುಲಾಲ್ ಕಬ್ಬಿನಾಲೆ, ಸುರೇಶ್ ಕುಲಾಲ್ ಮುದ್ರಾಡಿ, ಸುಮಿತ್ರ ಕುಲಾಲ್ ಬೆಪ್ದೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.









































































































error: Content is protected !!
Scroll to Top