ಬೆಂಗಳೂರು : ದೇವಾಡಿಗ ನವೋದಯ ಸಂಘ ಬೆಂಗಳೂರು ಇದರ 2026ರ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮ ಬೆಂಗಳೂರು ಮಹಾನಗರದ ಹೋಟೆಲ್ ಸಿಂಧೂರ ಗಾರ್ಡನಿಯ ರೆಸ್ಟೋರೆಂಟ್‌ನಲ್ಲಿ ನಡೆಯಿತು.

ಪ್ರಧಾನ ಕಾರ್ಯದರ್ಶಿ ಚರಣ್ ಬೈಂದೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಹರಿ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಮಂಜುನಾಥ ದೇವಾಡಿಗ, ಗೌರವ ಅಧ್ಯಕ್ಷ ಬಿ. ಆರ್. ದೇವಾಡಿಗ, ಕೋಶಾಧಿಕಾರಿ ಗೋಪಾಲ ಸೇರಿಗಾರ್ , ಸದಸ್ಯ ಅಶೋಕ ದೇವಾಡಿಗ, ಕದಂ ಮಾಜಿ ಕಾರ್ಯದರ್ಶಿ ನಾರಾಯಣ ದೇವಾಡಿಗ, ಚಾರ್ಟಡ್ ಅಕೌಂಟೆಂಟ್ ಸೂರ್ಯಕಾಂತ ದೇವಾಡಿಗ, ಸುದ್ದಿ ವಾಹಿನಿ ನಿರೂಪಕಿ ಅಶ್ವಿನಿ ದೇವಾಡಿಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಸುಧೀರ್ ಮುದ್ರಾಡಿ ಕಾರ್ಯಕ್ರಮ ನಿರ್ವಹಿಸಿದರು.


























