ಪ್ರಧಾನ ಮಂತ್ರಿ ಆತ್ಮನಿರ್ಭರ ನಿಧಿ ಪರಿಷ್ಕೃತ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಬಡ್ಡಿ ಸಹಾಯಧನ ಕಿರು ಸಾಲ ಸೌಲಭ್ಯ

ಕಾರ್ಕಳ : ಪ್ರಧಾನ ಮಂತ್ರಿ ಆತ್ಮನಿರ್ಭರ ನಿಧಿ ಪರಿಷ್ಕೃತ ಯೋಜನೆಯಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಕಿರು ಸಾಲ ದೊರೆಯಲಿದೆ.

ಸಾಲ ಸೌಲಭ್ಯ
ಪ್ರಥಮ ಹಂತ – 15000 ರೂ. ಸಾಲ
ಎರಡನೇ ಹಂತ – 25000 ರೂ. ಸಾಲ
ಮೂರನೇ ಹಂತ – 50000 ರೂ. ಸಾಲ
ರುಪೇ ಕ್ರೆಡಿಟ್ ಕಾರ್ಡ್ – 30000 ರೂ. ಸಾಲ
ವಿವಿಧ ರೀತಿಯ ಸಾಮರ್ಥ್ಯ ಅಭಿವೃದ್ಧಿ ತರಬೇತಿಗಳು ಇರಲಿದೆ.

ಈ ಯೋಜನೆಯಡಿ ನಗರ ಮತ್ತು ಜನಗಣತಿ ಪಟ್ಟಣ ಪ್ರದೇಶದ ಆರ್ಥಿಕವಾಗಿ ದುರ್ಬಲವಾಗಿರುವ ಬೀದಿ ಬದಿ ವ್ಯಾಪಾರಿಗೆ ಬ್ಯಾಂಕ್ ಮುಖಾಂತರ ಬಡ್ಡಿ ಸಹಾಯಧನ ಸಾಲ ನೀಡಲಾಗುವುದು. ವಿವಿಧ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡುವ ಬೀದಿ ಬದಿ ವ್ಯಾಪಾರಸ್ಥರು ಈ ಸಾಲಕ್ಕೆ ಅರ್ಹರು.

ಸಾಲ ಪಡೆಯಲು ಬೇಕಾಗುವ ದಾಖಲೆಗಳು : ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪಾನ್ ಕಾರ್ಡ್, ವೋಟರ್ ಕಾರ್ಡ್ ಹಾಗೂ ರೇಷನ್ ಕಾರ್ಡ್.
ಕಾರ್ಕಳ ಪುರಸಭೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.





























































































































error: Content is protected !!
Scroll to Top