ಡಿ. 13 : ಕೆ.ಎಂ.ಇ.ಎಸ್. ಶಿಕ್ಷಣ ಸಂಸ್ಥೆಯ 42ನೇ ವಾರ್ಷಿಕೋತ್ಸವ

ಡಿ. 10ರಂದು ವಿಜ್ಞಾನ ಮಾದರಿಗಳ ಅನ್ವೇಷಣಾ – ವ್ಯಾಪಾರ ಉತ್ಸವ

ಕಾರ್ಕಳ : ನಾಲ್ಕು ದಶಕಗಳಿಂದ ವಿದ್ಯಾಭ್ಯಾಸ ನೀಡುತ್ತಿರುವ ಕುಕ್ಕುಂದೂರಿನ ಕೆ.ಎಂ.ಇ.ಎಸ್. ಶಿಕ್ಷಣ ಸಂಸ್ಥೆಯ 42ನೇ ವರ್ಷದ ವಾರ್ಷಿಕೋತ್ಸವ – ಕೆ.ಎಂ.ಇ.ಎಸ್. ಪರ್ವ ಡಿ. 13ರಂದು ನಡೆಯಲಿದೆ. ವಾರ್ಷಿಕೋತ್ಸವದ ಸಲುವಾಗಿ ಇಂದು (ಡಿ.6) ಸಂಸ್ಥೆಯಲ್ಲಿ ಕಾರ್ಯಕ್ರಮದ ಬ್ಯಾನರ್ ರಿಲೀಸಿಂಗ್ ನಡೆಯಿತು. ಡಿ. 10ರಂದು ವಿಜ್ಞಾನ ಮಾದರಿಗಳ ಅನ್ವೇಷಣಾ ಹಾಗೂ ವ್ಯಾಪಾರ ಉತ್ಸವ ನಡೆಯಲಿದೆ.

ಡಿ. 13ರಂದು ಮಧ್ಯಾಹ್ನ 3.30ಕ್ಕೆ ನಡೆಯುವ ಕೆ.ಎಂ.ಇ.ಎಸ್. ಪರ್ವದ ಅಧ್ಯಕ್ಷತೆಯನ್ನು ಮಾಜಿ ಸಚಿವ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಸಮಿತಿಯ ಮಾಜಿ ಅಧ್ಯಕ್ಷ, ಕೆಎಂಇಎಸ್‌ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಅಲ್‌ ಹಾಜಿ ಕೆ. ಎಸ್. ಮೊಹಮ್ಮದ್‌ ಮಸೂದ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾರ್ಕಳ ತಾಲೂಕು ತಹಾಶೀಲ್ದಾರ್ ಪ್ರದೀಪ್ ಆರ್., ಅಜೆಕಾರು ಪದ್ಮಗೋಪಾಲ ಎಜುಕೇಶನ್ ಟ್ರಸ್ಟ್ ಜ್ಞಾನಸುಧಾ ವಿದ್ಯಾಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಜ್ಯೋತಿ ಪದ್ಮನಾಭ ಭಂಡಿ, ಶಿರ್ಡಿ ಸಾಯಿ ಶಿಕ್ಷಣ ಸಂಸ್ಥೆ ಕಾರ್ಕಳ ಇದರ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಶಿಷ್ ಶೆಟ್ಟಿ, ಕುಶಾಲನಗರ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಸಲಹೆಗಾರೆ ಡಾ. ಅಷಿತಾ ಕೃಷ್ಣ, ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಇಮ್ತಿಯಾಜ್ ಅಹಮದ್ ಹಾಗೂ ಕೆ.ಎಂ.ಇ.ಎಸ್ ಶಿಕ್ಷಣ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯ ಮೊಹಮ್ಮದ್ ರವರು ಭಾಗವಹಿಸಲಿದ್ದಾರೆ.

ಬ್ಯಾನರ್ ರಿಲೀಸಿಂಗ್

ಆಂಗ್ಲ ಮಾಧ್ಯಮ ಶಿಕ್ಷಣದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಂಚಿತರಾಗಬಾರದು ಮತ್ತು ಔದ್ಯೋಗಿಕವಾಗಿ ಸರಿಸಮಾನ ಅವಕಾಶಗಳು ಅವರಿಗೂ ಲಭಿಸಬೇಕು ಎಂಬ ಧ್ಯೇಯದಿಂದ ಜನ್ಮ ತಾಳಿದ ಕೆ.ಎಂ.ಇ.ಎಸ್ ವಿದ್ಯಾ ಸಂಸ್ಥೆ ಹಾಜಿ ಪಿ.ಎಂ. ಖಾನ್, ಕೆ.ಎಸ್. ನಜೀರ್ ಅಹಮದ್ ಮತ್ತು ಹಾಜಿ ಎ.ಎಸ್. ರಶೀದ್ ಹೈದರ್ ಅವರ ಸೇವಾ ಕೈಂಕರ್ಯದ ಕನಸಿನ ಕೂಸು. ಕೆ.ಎಸ್. ಮೊಹಮ್ಮದ್ ಮಸೂದ್ ಅವರ ನಿರಂತರ ಮಾರ್ಗದರ್ಶನ, ಕೆ.ಎಸ್. ನಿಸಾರ್ ಅಹಮದ್ ಅವರ ನಿಸ್ವಾರ್ಥ ಸೇವೆಯಿಂದ, ಪೋಷಕ ಬಂಧುಗಳ ಪೂರ್ಣ ಸಹಕಾರದಿಂದ ಈ ವಿದ್ಯಾಸಂಸ್ಥೆ ಬೆಳೆದು ಇಂದು ವಿಶಾಲ ಆಲದ ಮರವಾಗಿದೆ. 42 ವರ್ಷಗಳ ಸಾರ್ಥಕ ಸೇವೆಯ ಹಾಗೂ ಜ್ಞಾನ ಪ್ರಸರಣದ ಹೆಗ್ಗುರುತಾಗಿ ಬೆಳೆದಿರುವ ಕೆ.ಎಂ.ಇ.ಎಸ್ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಸ್ ಇಮ್ತಿಯಾಜ್ ಅಹಮದ್, ಪ್ರಾಂಶುಪಾಲ ಕೆ. ಬಾಲಕೃಷ್ಣ ರಾವ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪಾಟ್ಕರ್ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಲೊಲಿಟಾ ಝೀನಾ ಡಿಸಿಲ್ವಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : https://newskarkala.com/2025/03/23/karkala-kmes-school-shaped-the-future-of-rural-students/





























































































































error: Content is protected !!
Scroll to Top