ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ವಿದ್ಯಾಮಂದಿರ

ನಾಲ್ಕು ದಶಕಗಳ ಸಾರ್ಥಕ ಶಿಕ್ಷಣ ಸೇವೆ ನೀಡಿದ ಕೆಎಂಇಎಸ್‌ಗೆ ಹೊಸ ಸ್ಪರ್ಶ

ನಾಲ್ಕು ದಶಕಗಳಿಂದ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಾ ಸಹಸ್ರಾರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸಿದ ವಿದ್ಯಾದೇಗುಲವೇ ಕುಕ್ಕುಂದೂರು ಕೆ.ಎಂ.ಇ.ಎಸ್. ಸಮೂಹ ಸಂಸ್ಥೆಗಳು. 1983ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಅತಿ ಸುಲಭವಾಗಿ ಲಭಿಸುವಂತೆ ಮಾಡುವಲ್ಲಿ ಮಹತ್ತರವಾದ ಪಾತ್ರವಹಿಸಿದೆ. ಪರಿಸರದ ವಿದ್ಯಾರ್ಥಿಗಳಲ್ಲಿ ಅಂತರ್‌ ಸ್ಪೂರ್ತಿ, ಆತ್ಮವಿಶ್ವಾಸವನ್ನು ತುಂಬಿ ಬೆಳೆಸಿದ್ದು ಮಾತ್ರವಲ್ಲದೇ ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸಿರುವ ವಿದ್ಯಾರ್ಥಿ ಬಳಗವೇ ಇದರ ಯಶಸಿನ ಸಾಕ್ಷಿಗಳು.

ಯಾವುದೇ ಶ್ರೇಷ್ಠ ಸಂಸ್ಥೆ ದೊಡ್ಡ ಕನಸುಗಳಿಂದ ಆರಂಭಗೊಳ್ಳುತ್ತದೆ ಅಂತೆಯೇ ಕೆ.ಎಂ.ಇ.ಎಸ್‌. ತನ್ನ ಸಂಸ್ಥಾಪಕರ ದೃಢ ಸಂಕಲ್ಪದಿಂದ ಈ ಸಾಧನೆಗೇರಿದೆ. ದಶಕಗಳಿಂದ ಈ ಸಂಸ್ಥೆ ಸಾಕಷ್ಟು ಬೆಳವಣಿಗೆಯನ್ನು ಕಂಡಿದೆ ಎಂದಾದರೆ ಇದರ ಹಿಂದಿರುವ ಪ್ರೇರಕ ಶಕ್ತಿಗಳೆಂದರೆ ಸಂಸ್ಥಾಪಕ ದೂರದೃಷ್ಟಿಯೇ ಅದಕ್ಕೆ ಕಾರಣ. ಅಧ್ಯಕ್ಷ-ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರ ಯೋಚನೆ-ಯೋಜನೆ, ಸಹಕಾರದ ಫಲವೇ ಆಗಿದೆ. ದಣಿವರಿಯದ ಶಿಕ್ಷಕರ ವೃಂದದ ಪರಿಶ್ರಮ. ಪ್ರತಿಯೊಬ್ಬ ವಿದ್ಯಾರ್ಥಿಗೂ ಶ್ರೇಷ್ಠ ಶಿಕ್ಷಣವನ್ನು ಒದಗಿಸುವುದು ಶಾಲೆಯನ್ನು ಮಾದರಿ ಸಂಸ್ಥೆಯನ್ನಾಗಿ ಪರಿವರ್ತಿಸುವುದು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡುವುದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶವನ್ನು ಒದಗಿಸುವುದು – ಇವು ಇಂದಿಗೂ ಕೆ.ಎಂ.ಇ.ಎಸ್.‌ ನ ಧ್ಯೇಯವಾಗಿದೆ.

ಹಾಜಿ ಪಿ.ಎಂ. ಖಾನ್‌ ಸ್ಥಾಪಕ ಸಂಸ್ಥಾಪಕರು. ಕೆ.ಎಸ್.‌ ನಝೀರ್‌ ಅಹಮ್ಮದ್‌ ಸ್ಥಾಪಕ ಕೋಶಾಧಿಕಾರಿ ಹಾಗೂ ಎ.ಎಸ್.‌ ರಶೀದ್‌ ಹೈದರ್‌ ಸ್ಥಾಪಕ ಕಾರ್ಯದರ್ಶಿ ಆಗಿದ್ದರು. ಹಿರಿಯರಾದ ಕೆ. ಎಸ್.‌ ಮೊಹಮ್ಮದ್ ಮಸೂದ್‌ ಅವರು ದೀಪಸ್ತಂಭವಾಗಿ ದಶಕಗಳಿಂದ ವಿದ್ಯಾಸಂಸ್ಥೆಯ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆ. ಎಸ್‌. ನಿಸಾರ್‌ ಅಹ್ಮದ್ ಅವರು ಸಂಸ್ಥೆಗೆ ಸದಾ ಬೆಂಗಾವಲಾಗಿದ್ದಾರೆ. ಅಭಿವೃದ್ಧಿಯ ಪಣತೊಟ್ಟು ಆ ದಿಸೆಯಲ್ಲಿ ಮುಂದುವರಿಯುತ್ತಿದ್ದಾರೆ.

ಹಲವು ವರ್ಷಗಳಿಂದ ಕೆಎಂಇಎಸ್‌ ತನ್ನ ಶೈಕ್ಷಣಿಕ, ಪಠ್ಯೇತರ ಚಟುವಟಿಕೆಗಳು ಮತ್ತು ಕ್ರೀಡಾ ಸಾಧನೆಗಳಲ್ಲಿ ಅಗ್ರಗಣ್ಯ ಸ್ಥಾನ ಪಡೆದುಕೊಂಡಿದೆ. ಇಲ್ಲಿನ ವಿದ್ಯಾರ್ಥಿಗಳು ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. ಈ ಸಾಧನೆಗಳ ಹಿಂದಿರುವ ಶ್ರಮ ಗುಣಮಟ್ಟದ ಶಿಕ್ಷಣ ಮತ್ತು ಸಮಗ್ರ ಬೆಳವಣಿಗೆ.













































































error: Content is protected !!
Scroll to Top