ಕಾರ್ಕಳ : ಕಾರ್ಕಳ ಕಸಬಾ ಗ್ರಾಮದ ಸರಕಾರಿ ಆಸ್ಪತ್ರೆಯ ಎದುರು ಸಾರ್ವಜನಿಕ ಸ್ಥಳದಲ್ಲಿ ಹಣ ಪಣವಾಗಿಟ್ಟು ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದ 10 ಆರೋಪಿಗಳನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ನಗರ ಪೊಲೀಸ್ ಉಪನಿರೀಕ್ಷಕ ಶಿವಕುಮಾರ್ ಎಸ್. ಆರ್ ಅವರು ಸುಳಿವಿನ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ 4135 ರೂ. ನಗದು ಮತ್ತು ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಬೆಟ್ಟು ನಿವಾಸಿ ಚಂದ್ರಶೇಖರ ಶೆಟ್ಟಿ (59), ಕೊಪ್ಪಳದ ಹನುಮಂತ (28), ಮಾರುತಿ (19), ಮಂಜುನಾಥ (20), ಸೋಮಣ್ಣ (60), ರಾಯಚೂರಿನ ವೆಂಕಪ್ಪ (27), ಹಾವೇರಿಯ ಪ್ರವೀಣ ಬಡಿಗೇರ (27), ಕೊಪ್ಪಳದ ಹನುಮೇಶ (28), ಗದಗದ ಪರ್ವತ ಗೌಡ (38) ಮತ್ತು ಕೊಪ್ಪಳದ ನೀರ್ಪಾದಿ (25) ಆರೋಪಿಗಳು.
ಅಂದರ್ ಬಾಹರ್ ಆಡುತ್ತಿದ್ದ ಹತ್ತು ಮಂದಿ ಸೆರೆ







































