ನಾಲ್ಕೂರು ನರಸಿಂಗರಾವ್‌ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜು – ಪ್ರೌಢಶಾಲಾ ವಿಭಾಗ ಶಿರ್ಲಾಲು

ಕಾರ್ಕಳ : ನಾಲ್ಕೂರು ನರಸಿಂಗರಾವ್‌ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜು – ಪ್ರೌಢಶಾಲಾ ವಿಭಾಗ ಶಿರ್ಲಾಲು ಇಲ್ಲಿ ಡಿ. 6 ರಂದು ವಾರ್ಷಿಕ ಪ್ರತಿಭಾ ಪುರಸ್ಕಾರ ಮತ್ತು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ನಡೆಯಲಿದೆ.

ಬೆಳಿಗ್ಗೆ 10 ಗಂಟೆಗೆ ಪ್ರೌಢಶಾಲಾ ಮತ್ತು ಕಾಲೇಜು ವಿಭಾಗದ ವಾರ್ಷಿಕ ಪ್ರತಿಭಾ ಪುರಸ್ಕಾರ, ಸಂಜೆ 4.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ಹಾಗೂ ಪ್ರೌಢಶಾಲಾ ಮತ್ತು ಕಾಲೇಜು ವಿಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ಸಂಜೆ 6ರಿಂದ ಸಂಸ್ಥೆಯ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವಿನೋದಾವಳಿಗಳು, ಸಂಜೆ 7 ಗಂಟೆಗೆ ರಂಗಭೂಷಣ ಮಣಿ ಕೋಟೆಬಾಗಿಲು ಕಥೆ – ಸಂಭಾಷಣೆ ನಿರ್ದೇಶನದ ಪಿಂಗಾರ ಕಲಾವಿದೆರ್‌ ಬೆದ್ರ ತಂಡದವರಿಂದ ಭಕ್ತಿ ಪ್ರಧಾನ ತುಳು ಹಾಸ್ಯಮಯ ನಾಟಕ ಓಂಕಾರ ಪ್ರದರ್ಶನಗೊಳ್ಳಲಿದೆ.











































































error: Content is protected !!
Scroll to Top