ಗಂಡ – ಹೆಂಡತಿ ಜಗಳ : ಹಲ್ಲೆ – ಗಂಡ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ : ಗಂಡ ಹೆಂಡತಿ ನಡುವೆ ಜಗಳ ನಡೆದಿದ್ದು, ಈ ವೇಳೆ ಹೆಂಡತಿಗೆ ಕೋಲಿನಿಂದ ಹೊಡೆದು ಬಳಿಕ ಗಂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಡಿ. 1ರಂದು ನಿಟ್ಟೆಯಲ್ಲಿ ನಡೆದಿದೆ. ಪೋಸ್ಟ್‌ಮ್ಯಾನ್‌ ಪೋಸ್ಟ್‌ ನೀಡಲು ಶಕುಂತಳ ಶೆಟ್ಟಿಯವರ ಮನೆಗೆ ಬಂದಾಗ ಅವರು ಗಾಯಗೊಂಡಿರುವುದನ್ನು ಕಂಡು ಪೋಸ್ಟ್‌ಮ್ಯಾನ್‌ ಶಕುಂತಳಾ ಅವರ ಮಗ ಸಾಯಿಕಿರಣ್ ಶೆಟ್ಟಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಮನೆಗೆ ಬಂದ ಸಾಯಿಕಿರಣ್‌ ತಾಯಿಯಲ್ಲಿ ವಿಚಾರಿಸಿದಾಗ ತಂದೆ ಕೋಲಿನಿಂದ ಹೊಡೆದಿರುವುದಾಗಿ ತಿಳಿಸಿರುತ್ತಾರೆ.

ತಂದೆ ಮಲಗುವ ಕೋಣೆಯ ಬಾಗಿಲು ಹಾಕಿದ್ದು, ಬಾಗಿಲು ತಟ್ಟಿದರೂ ಬಾಗಿಲು ತೆರೆಯದೇ ಇದ್ದಾಗ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ವೇಳೆ ತಂದೆ ಕೋಣೆಯೊಳಗೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ತಂದೆ-ತಾಯಿಯ ಮಧ್ಯೆ ಯಾವುದೋ ಕಾರಣಕ್ಕಾಗಿ ಜಗಳ ಆಗಿದ್ದು ತಂದೆ, ತಾಯಿಗೆ ಮರದ ಕೋಲಿನಿಂದ ಹೊಡೆದು ಗಾಯಗೊಳಿಸಿದ್ದು, ನಂತರ ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮಗ ಸಾಯಿಕಿರಣ್‌ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ತಿಳಿಸಿದ್ದಾರೆ.











































































error: Content is protected !!
Scroll to Top