ರಿಯಾಜ್ ಮಹಮ್ಮದ್ ಚುನಾವಣಾಧಿಕಾರಿಯಾಗಿ ನೇಮಕ
ಕಾರ್ಕಳ : ಸಾಲ್ಮರ ಜಾಮೀಯ ಮಸ್ಜಿದ್ ಸಮಿತಿಗೆ ಡಿ. 28ರಂದು ಚುನಾವಣೆ ನಡೆಯಲಿದ್ದು, ಅಜೆಕಾರು ಕಂದಾಯ ನಿರೀಕ್ಷಕ ರಿಯಾಜ್ ಮಹಮ್ಮದ್ ಅವರನ್ನು ಚುನಾವಣಾಧಿಕಾರಿ ವಕ್ಫ್ ಮಂಡಳಿ ನೇಮಕಗೊಳಿಸಿ ಆದೇಶಿಸಿದೆ. 11 ಮಂದಿ ಸದಸ್ಯರ ಆಯ್ಕೆಗೆ ಡಿ. 28ರಂದು ಬೆಳಿಗ್ಗೆ 8ರಿಂದ ಸಂಜೆ 3ರವರೆಗೆ ಮಸ್ಜಿದ್ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ. ಅಭ್ಯರ್ಥಿಗಳು ಡಿ. 1ರಿಂದ 7ರವರೆಗೆ ನಾಮಪತ್ರ ಸಲ್ಲಿಕೆ ಮಾಡಬಹುದಾಗಿದೆ. ಡಿ. 9ರಂದು ನಾಮಪತ್ರ ಪರಿಶೀಲನೆ ನಡೆದು ಚುನಾವಣೆ ದಿನದಂದೇ ಫಲಿತಾಂಶ ಪ್ರಕಟವಾಗಲಿದೆ. ಕಾರ್ಕಳದಲ್ಲಿ ಒಟ್ಟು 803 ಜಮಾತ್‌ಗೆ ಮತದಾರರಿದ್ದಾರೆ.







































