ಆಳ್ವಾಸ್ ಸಾಂಸ್ಕೃತಿಕ ವೈಭವ – ಮರುಕಳಿಸಿತು ಕಾರ್ಕಳ ಉತ್ಸವದ ನೆನಪು

ಸಾಂಸ್ಕೃತಿಕ ರಸದೌತಣಕ್ಕೆ ಸಾಕ್ಷಿಯಾದ ಬೃಹತ್‌ ಜನಸ್ತೋಮ

ಕಾರ್ಕಳ : ಕಾರ್ಕಳದಲ್ಲಿ ನಡೆದ ಆಳ್ವಾಸ್‌ ಸಾಂಸ್ಕೃತಿಕ ವೈಭವ 2022ರಂದು ಅಭೂತಪೂರ್ವವಾಗಿ ನಡೆದ ಕಾರ್ಕಳ ಉತ್ಸವದ ನೆನಪು ಮರುಕಳಿಸುವಂತೆ ಮಾಡಿದೆ. ಆಳ್ವಾಸ್ ನುಡಿಸಿರಿ ವಿರಾಸತ್‌ ಘಟಕ ಕಾರ್ಕಳ ಇದರ ವತಿಯಿಂದ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ಸುಮಾರು 500 ವಿದ್ಯಾರ್ಥಿಗಳಿಂದ ಮೈನವಿರೇಳಿಸುವ‌ ಸಾಂಸ್ಕೃತಿಕ ಕಾರ್ಯಕ್ರಮ ನೆರೆದ ಬೃಹತ್‌ ಜನಸ್ತೋಮಕ್ಕೆ ರಸದೌತಣ ಉಣಬಡಿಸಿದೆ. ಸ್ವರಾಜ್ಯ ಮೈದಾನ ತುಂಬೆಲ್ಲ ನೆರೆದ ಪ್ರೇಕ್ಷಕರು ಮೂರು ಗಂಟೆಗಳ ಕಾಲ ಸಾಂಸ್ಕೃತಿಕ ಲೋಕದಲ್ಲಿ ಮಗ್ನರಾದರು. ನೂರು ಅಡಿ ಉದ್ದದ ಬೃಹತ್‌ ವೇದಿಕೆಯಲ್ಲಿ ನೂರಾರು ಕಲಾವಿದರು ಏಕಕಾಲದಲ್ಲಿ ನೀಡಿದ ಕಾರ್ಯಕ್ರಮ ಕಲಾಭಿಮಾನಿಗಳ ಮನಸೂರೆಗೊಂಡಿತು. ಮಲ್ಲಕಂಬ, ಮಣಿಪುರಿ ಸ್ಟಿಕ್ ಡಾನ್ಸ್‌, ಸಿಂಹ ನೃತ್ಯ ವೇದಿಕೆಯಲ್ಲಿ ಪ್ರದರ್ಶನವಾಗುತ್ತಿದ್ದಂತೆ‌ ಪ್ರೇಕ್ಷಕರ ಕರತಾಡನ ಮುಗಿಲುಮುಟ್ಟಿತು. ಚೆಂಡೆ ಮೇಳದ ಪ್ರದರ್ಶನ ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡಿತು. ವೇದಿಕೆ ಮೇಲೆಯೊಮ್ಮೆಗೆ ಬಂದ ವಿವಿಧ ಮಾದರಿ ಗೊಂಬೆಗಳು ಆಕರ್ಷಣೀಯವಾಗಿದ್ದು ಪ್ರೇಕ್ಷಕರನ್ನು ಕುಣಿಯುವಂತೆ ಮಾಡಿತು. ತರಹೇವಾರಿ ಬೆಳಕು ಹೊಮ್ಮಿಸಿದ ಪಟಾಕಿ ಹಬ್ಬದ ಸಂಭ್ರಮ ಮೂಡಿಸಿತು. ಒಟ್ಟಾರೆಯಾಗಿ ಡಾ. ಎಂ. ಮೋಹನ ಆಳ್ವರ ಪರಿಕಲ್ಪನೆ ಸಾರ್ಥಕ್ಯ ಕಂಡಿತು.

ಸಾಂಸ್ಕೃತಿಕ ರಾಯಭಾರಿ
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಬರೋಡಾ ಉದ್ಯಮಿ ಶಶಿಧರ್‌ ಶೆಟ್ಟಿ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಾತ್ರ ಪ್ರಸಿದ್ಧಿ ಪಡೆಯದೇ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿದ್ಯಾ ದಾನ ಮಾಡುವ ಮೂಲಕ ಅಪೂರ್ವ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಡಾ. ಮೋಹನ ಆಳ್ವರ ಕಲಾಸಕ್ತಿ ಅವರನ್ನು ನಾಡಿನ ಸಾಂಸ್ಕೃತಿಕ ರಾಯಭಾರಿಯನ್ನಾಗಿದೆ ಎಂದರು.

ಪರಂಪರೆ ಪಸರಿಸುವ ಕಾರ್ಯ
ಪ್ರಾಸ್ತವಿಕ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವರು, ಭಾರತೀಯ ಪರಂಪರೆ, ಸಂಸ್ಕೃತಿ, ಸಂಪ್ರದಾಯ ಪಸರಿಸುವ ನಿಟ್ಟಿನಲ್ಲಿ 88 ಕಡೆ ನುಡಿಸಿರಿ, ವಿರಾಸತ್‌ ಘಟಕ ರಚಿಸಲಾಗಿದೆ ಎಂದರು. ಕಳೆದ 30 ವರ್ಷಗಳಿಂದ ಜಾತಿ, ಧರ್ಮ, ಮತ, ಭಾಷೆ ಮೀರಿ ಸಾಂಸ್ಕೃತಿಕ ವೈಭವ ಸಂಸ್ಥೆ ಮಾಡಿಕೊಂಡು ಬಂದಿದೆ ಎಂದರು.

ಆಳ್ವಾಸ್ ನುಡಿಸಿರಿ- ವಿರಾಸತ್ ಕಾರ್ಕಳ ಘಟಕದ ಅಧ್ಯಕ್ಷ ವಿಜಯ ಶೆಟ್ಟಿ, ನಾರಾಯಣ ಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್‌, ತಹಶೀಲ್ದಾರ್‌ ಪ್ರದೀಪ್‌ ಆರ್. ಅಜೆಕಾರ್‌ ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ತರಂಗ ಸಂಪಾದಕಿ ಡಾ. ಯು.ಬಿ. ರಾಜಲಕ್ಷ್ಮೀ, ಕಾಂಗ್ರೆಸ್‌ ಮುಖಂಡರಾದ ಉದಯ ಕುಮಾರ್ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್‌, ಜೈನ್‌ ಹೊಟೇಲ್‌ ಮಾಲಕ ಗುಣಪಾಲ್‌ ಜೈನ್‌, ಸಾಣೂರು ರಾಜೇಶ್ವರಿ ಕಾಲೇಜಿನ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ, ಉದ್ಯಮಿಗಳಾದ ರವೀಂದ್ರ ಶೆಟ್ಟಿ ಬಜಗೋಳಿ, ರಾಜೇಶ್‌ ಲೋಬೋ, ನಿವೃತ್ತ ಎಲ್‌ಐಸಿ ಅಧಿಕಾರಿ ಪದ್ಮನಾಭ ಭಂಡಿ, ಗೋವಾ ಉದ್ಯಮಿ ಗಣೇಶ್‌ ಇರ್ವತ್ತೂರು, ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ, ವನ್ಯಜೀವಿ ವಿಭಾಗದ ಎಸಿಎಫ್‌ ದಿನೇಶ್ ಜಿ.ಡಿ., ಪುರಸಭಾ ಅಧ್ಯಕ್ಷ ಯೋಗೀಶ್‌ ದೇವಾಡಿಗ, ಗೇರು ನಿಗಮದ ಮಾಜಿ ಅಧ್ಯಕ್ಷ ಮಣಿರಾಜ ಶೆಟ್ಟಿ, ನಿವೃತ್ತ ಮುಖ್ಯಶಿಕ್ಷಕ ಮುನಿರಾಜ ರೆಂಜಾಳ, ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಕೊಟ್ಯಾನ್, ಎಂಸಿಎಫ್‌ ಜೆಜೆಎಂ ಕೀರ್ತನ್‌ ಕುಮಾರ್‌, ಜೇಸಿ ರಾಷ್ಟ್ರೀಯ ತರಬೇತಿದಾರ ರಾಜೇಂದ್ರ ಭಟ್‌, ಪತ್ರಕರ್ತ ಜಿತೇಂದ್ರ ಕುಂದೇಶ್ವರ, ರೂರಲ್‌ ಜೇಸಿಐ ಅಧ್ಯಕ್ಷ ಅರುಣ್‌ ಮಾಂಜ, ರೋಟರಿ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ಉದ್ಯಮಿ ಜಾನ್‌ ಡಿಸಿಲ್ವಾ, ಕ್ರಿಯೇಟಿವ್ ಕಾಲೇಜಿನ ಸಹಸಂಸ್ಥಾಪಕ ಗಣನಾಥ ಶೆಟ್ಟಿ, ದುರ್ಗಾಪರಮೇಶ್ವರಿ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್‌ ರಾವ್‌, ಕಾರ್ಕಳ ಎಸ್‌ಕೆಪಿಎ ಅಧ್ಯಕ್ಷ ಪ್ರಮೋದ್‌ಚಂದ್ರ ಪೈ, ಕಾರ್ಯಕ್ರಮದ ಸಂಘಟಕರಾದ ಅಂಬರೀಶ್ ಚಿಪಳೂಣಕರ್‌, ಬಾಲಕೃಷ್ಣ ಶೆಟ್ಟಿ, ಜೇಸಿಐ ಕಾರ್ಕಳ ಅಧ್ಯಕ್ಷೆ ಶ್ವೇತಾ ಜೈನ್‌, ವರ್ಧಮಾನ ಶಿಕ್ಷಣ ಸಂಸ್ಥೆ ಸಂಚಾಲಕಿ ಶಶಿಕಲಾ ಕೆ. ಹೆಗ್ಡೆ, ನ್ಯಾಯವಾದಿಗಳಾದ ವಿಜೇಂದ್ರ ಕುಮಾರ್‌, ರವೀಂದ್ರ ಮೊಯ್ಲಿ, ಎಂ.ಕೆ. ವಿಫುಲ್‌, ಉದ್ಯಮಿ ನಿತ್ಯಾನಂದ ಪೈ, ಜಿ.ಪಂ. ಮಾಜಿ ಸದಸ್ಯ ಉದಯ ಕೋಟ್ಯಾನ್‌ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕ ವೇಣು ಗೋಪಾಲ್ ಕಾರ್ಯಕ್ರಮ ನಿರೂಪಿಸಿ, ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ವಂದಿಸಿದರು.

ಡಾ. ಎಂ. ಮೋಹನ ಆಳ್ವರನ್ನು ಕಾರ್ಕಳ ಘಟಕದ ವತಿಯಿಂದ ಸನ್ಮಾನಿಸಲಾಯಿತು








































































































error: Content is protected !!
Scroll to Top