ಕಾಪುವಿನಲ್ಲಿ ಭೀಕರ ಅಪಘಾತ – ಐವರ ದುರ್ಮರಣ

ಉಡುಪಿ : ಕಾಪು ತಾಲೂಕು ಕೋತಲಕಟ್ಟೆ ಬಳಿ ಮಿನಿ ಟೆಂಪೋ ಪಲ್ಟಿಯಾಗಿ ಐವರು ಮೃತಪಟ್ಟ ಘಟನೆ ರವಿವಾರ ಸಂಜೆ ಸಂಭವಿಸಿದೆ. ಕಾಪುವಿನಿಂದ ಮಲ್ಪೆಗೆ ತೆರಳುತ್ತಿದ್ದ ಡೆಕೋರೇಷನ್ ಸಾಮಗ್ರಿ ತುಂಬಿದ್ದ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲಿಂದ ಸರ್ವಿಸ್ ರಸ್ತೆಗೆ ಹೊರಳಿದೆ. ಪರಿಣಾಮ ಟೆಂಪೋದಲ್ಲಿದ್ದ ಹೊರ ರಾಜ್ಯದ ಕಾರ್ಮಿಕರು ರಸ್ತೆಗೆ ಎಸೆಯಲ್ಪಟ್ಟು ಐವರು ಮೃತಪಟ್ಟಿರುತ್ತಾರೆ. 7 ಮಂದಿ ಗಾಯಗೊಂಡಿದ್ದು, ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಮೂವರು ಆಸ್ಪತ್ರೆಯಲ್ಲಿ ಕೊನೆಯುಸಿಳೆದಿದ್ದಾರೆ. ಗಾಯಾಳುಗಳ ಪೈಕಿ ಒರ್ವನ ಸ್ಥಿತಿ ಗಂಭಿರವಾಗಿದ್ದು ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತರನ್ನು ಪಶ್ಚಿಮ‌ ಬಂಗಾಲ ಮೂಲದ ಕಮಲ್, ಸಾರಾಂಶ್, ಅಸ್ಸಾಂ ಮೂಲದ ಪಪ್ಪು ರವಿದಾಸ್, ಹರೀಶ್, ತ್ರಿಪುರಾ ಮೂಲದ ಗಪುನಾಥ್ ಎಂದು ಗುರುತಿಸಲಾಗಿದೆ. ಟೊಂಪೋ ಚಾಲಕ ರಂಜಿತ್ ಕುಮಾರ್, ಪ್ರಭಾಸ್ ರಾಯ್, ಸೂರಜ್, ಸುಬ್ರತ್, ಗಣೇಶ್, ಗೋಪಾಲ್ ಹಾಗೂ ಮತ್ತೋರ್ವ ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಹರಿರಾಮ್‌ ಶಂಕರ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ, ಕಾಪು ಠಾಣೆ ಎಸ್‌ಐ ತೇಜಸ್ವಿ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.



















error: Content is protected !!
Scroll to Top