ಕಳ್ಳತನದ ಆರೋಪ : ಯುವಕರ ತಂಡದಿಂದ ಹಲ್ಲೆ

ಕಾರ್ಕಳ : ಕುಕ್ಕುಂದೂರು ಗ್ರಾಮದ ಪೊಸನೊಟ್ಟುವಿನಲ್ಲಿ ಯುವಕನೋರ್ವನಿಗೆ ಕಳ್ಳತನದ ಆರೋಪದ ಮೇರೆಗೆ, ನಾಲ್ಕು ಜನರ ತಂಡವೊಂದು ಹಲ್ಲೆ ನಡೆಸಿದ ಪ್ರಕರಣ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ. ಹಲ್ಲೆಗೊಳಗಾದ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ನ.23 ರಂದು ಮುಂಜಾನೆ ಕುಕ್ಕುಂದೂರು ಪೊಸನೊಟ್ಟುವಿನ ಸುರೇಶ್ (28ವ.) ಎಂಬವರ ಮನೆ ಬಳಿ ಬಂದ ಶಿವರಾಜ್, ಶಶಿಕಿರಣ, ಹೇಮಂತ್ ಹಾಗೂ ವಿಜೇಶ್ ಎಂಬವರು ಸುರೇಶ ಅವರನ್ನು ಮನೆಯಿಂದ ಹೊರಗೆ ಕರೆದು ಅವಾಚ್ಯ ಶಬ್ದಗಳಿಂದ ಬೈದು ನೀನು ಕಳ್ಳತನ ಮಾಡುತ್ತೀಯಾ ಎಂದು ಹೇಳಿ, ಶಿವರಾಜ್ ಎಂಬಾತ ಮರದ ರೀಪಿನಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಉಳಿದವರು ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದಾರೆ.





































error: Content is protected !!
Scroll to Top