ಬಾಲಕ ನ್ಯಾಯ, ಮಕ್ಕಳ ಪಾಲನೆ ಮತ್ತು ರಕ್ಷಣೆ ಅಧಿನಿಯಮ 2000

ಕಾನೂನಿನ ಜೊತೆ ಸಂಘರ್ಷವಿರುವ ಬಾಲಕರಿಗೆ ಮತ್ತು ಪಾಲನೆ ಹಾಗೂ ರಕ್ಷಣೆಯ ಅವಶ್ಯಕತೆಯಿರುವ ಮಕ್ಕಳಿಗೆ ಸಂಬಂಧಿಸಿದಂತೆ, ಅವರ ಅಭಿವೃದ್ಧಿಪರ ಅಗತ್ಯತೆಗಳನ್ನು ಯುಕ್ತ ಪಾಲನೆ, ರಕ್ಷಣೆ ಮತ್ತು ಉಪಚಾರವನ್ನು ಒದಗಿಸುವ ಮೂಲಕ ಹಾಗೂ ಮಕ್ಕಳ ಅತ್ಯುತ್ತಮ ಹಿತದೃಷ್ಟಿಯಿಂದ ವಿಷಯಗಳ ನ್ಯಾಯ ನಿರ್ಣಯ ಮತ್ತು ವಿಲೇವಾರಿ ಮಾಡುವಲ್ಲಿ ಮಕ್ಕಳ ಬಗ್ಗೆ ಸ್ನೇಹಪರ ಮನೋಭಾವವನ್ನು ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಅಂತಿಮ ಪುನರ್‍ವಸತಿ ಕಲ್ಪಿಸುವ ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಅದಕ್ಕೆ ಪ್ರಾಸಂಗಿಕವಾದ ವಿಷಯಗಳ ಬಗ್ಗೆ ಕಾನೂನನ್ನು ಕ್ರೋಡಿಕರಿಸಿ, ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರವು 30-12-2000 ರಂದು ಬಾಲಕ ನ್ಯಾಯ,ಮಕ್ಕಳ ಪಾಲನೆ ಮತ್ತು ರಕ್ಷಣೆ ಅಧಿನಿಯಮ 2000 ಎಂಬ ಕಾನೂನನ್ನು ನಮ್ಮ ದೇಶದಲ್ಲಿ ಜಾರಿಗೆ ತಂದಿರುತ್ತದೆ. ಈ ಸಂಬಂಧ ಕಾನೂನಿನ ನಿಯಮಾನುಸಾರವಾಗಿ ಅಧಿಕಾರಗಳನ್ನು ಚಲಾಯಿಸುವುದಕ್ಕಾಗಿ ಮತ್ತು ಕರ್ತವ್ಯಗಳನ್ನು ನಿರ್ವಹಿಸುವುದಕ್ಕಾಗಿ ಪ್ರತಿಯೊಂದು ಜಿಲ್ಲೆಯಲ್ಲಿ ಒಂದು ಅಥವಾ ಹೆಚ್ಚು ಬಾಲಕ ನ್ಯಾಯ ಮಂಡಲಿಗಳನ್ನು ರಚಿಸಲಾಗಿರುತ್ತದೆ.

ಈ ಬಾಲ ನ್ಯಾಯ ಮಂಡಲಿಯಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅಥವಾ ಸಂದರ್ಭಾನುಸಾರ, ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಮತ್ತು ಕನಿಷ್ಠಪಕ್ಷ ಒಬ್ಬ ಮಹಿಳೆಯನ್ನೊಳಗೊಂಡ ಇಬ್ಬರು ಸಮಾಜ ಸೇವಾ ಕಾರ್ಯಕರ್ತರಿಂದ ಕೂಡಿದ ಸದಸ್ಯರುಗಳು ಕಾರ್ಯನಿರ್ವಹಿಸುತ್ತಾರೆ. ಬಾಲಕ ನ್ಯಾಯ ಮಂಡಲಿಯು ತಾನು ನಿರ್ಧರಿಸುವ ಕಾಲ ಮತ್ತು ಸ್ಥಳದಲ್ಲಿ ಸಭೆ ಸೇರಿ ಮಂಡಲಿಯ ಕಾರ್ಯಕಲಾಪವನ್ನು ಮೇಲ್ಕಾಣಿಸಿದ ಕಾನೂನಿನ ನಿಯಮಾನುಸಾರವಾಗಿ ನಡೆಸಬೇಕಾಗುತ್ತದೆ. ಜಾಮಿನೀಯವಾದ ಅಥವಾ ಜಾಮೀನೀಯವಲ್ಲದ ಅಪರಾಧಕ್ಕಾಗಿ ನಡೆಸಿರುವುದಕ್ಕಾಗಿ ಅಪಾದಿತನಾಗಿರುವ 18 ವರ್ಷ ಪ್ರಾಯದ ಒಳಗಿನ ಬಾಲಕನನ್ನು ಪೋಲೀಸರು ಬಂಧಿಸಿ ಬಾಲಕ ನ್ಯಾಯ ಮಂಡಲಿಯ ಸಮಕ್ಷಮ ಹಾಜರುಪಡಿಸಿದ ಸಂಧರ್ಭದಲ್ಲಿ ಆತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಪ್ರಕರಣದ ವಿಚಾರಣೆಯನ್ನು ನಡೆಸಲಾಗುತ್ತದೆ. ಆದರೆ ಬಾಲಕನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವುದರಿಂದ ಆತ ಯಾವುದೇ ಕುಖ್ಯಾತ ಅಪರಾಧಿಯೊಂದಿಗೆ ಕೈಜೋಡಿಸುವ ಸಾಧ್ಯತೆ ಕಂಡುಬಂದಲ್ಲಿ ಅಥವಾ ಬಾಲಕನಿಗೆ ಕುಖ್ಯಾತ ಅಪರಾಧಿಗಳಿಂದ ನೈತಿಕ, ದೈಹಿಕ ಅಥವಾ ಮಾನಸಿಕ ಅಪಾಯ ಒದಗುವ ಸಾಧ್ಯತೆ ಇರುವ ಬಗ್ಗೆ ಯುಕ್ತ ಕಾರಣಗಳು ಕಂಡುಬಂದಲ್ಲಿ ಆತನನ್ನು ಬಿಡುಗಡೆ ಮಾಡದೇ ಆತನನ್ನು ಬಾಲಕ ಪರಿವೀಕ್ಷಣಾಲಯದ ಅಧಿಕಾರಿಯವರಿಗೆ ಒಪ್ಪಿಸಬೇಕಾಗುತ್ತದೆ ಮತ್ತು ಆತನ ಮೇಲಿನ ಅಪರಾಧವು ವಿಚಾರಣೆಯಾಗುವರೆಗೆ ಅಥವಾ ಸೂಕ್ತ ಆದೇಶದ ಮೂಲಕ ನಿರ್ದಿಷ್ಟಪಡಿಸಬಹುದಾದಂತಹ ಅವಧಿಯವರೆಗೆ ಆತನನ್ನು ಪರಿವೀಕ್ಷಣಾಲಯದಲ್ಲಿ ಅಥವಾ ಬೇರೆ ಯಾವುದಾದರು ಸುರಕ್ಷಿತ ಸ್ಥಳಕ್ಕೆ ಕಳುಹಿಸಲು ಸೂಕ್ತ ಆದೇಶ ಮಾಡಬೇಕಾಗುತ್ತದೆ. ಬಾಲಕನ ವಿರುದ್ಧದ ಅಪರಾಧವನ್ನು ವಿಚಾರಣೆ ಮಾಡಿದ ಸಂಧರ್ಭದಲ್ಲಿ ಆತ ತಪ್ಪಿತಸ್ಥನೆಂದು ಬಾಲಕ ನ್ಯಾಯಮಂಡಲಿ ಅಭಿಪ್ರಾಯಪಟ್ಟಲ್ಲಿ ಮಂಡಲಿಯು ಬಾಲಕನ ತಂದೆ ತಾಯಿಗೆ ಅಥವಾ ಪಾಲಕರಿಗೆ ಸಲಹೆ ನೀಡಿ ಬಾಲಕನಿಗೆ ಬುದ್ಧಿವಾದ ಹೇಳಿ ಆತನು ಸಮೂಹ ಸಮಾಲೋಚನೆಯಲ್ಲಿ ಭಾಗವಹಿಸುವಂತೆ ಮತ್ತು ಸಮುದಾಯ ಸೇವೆ ಮಾಡುವಂತೆ ಬಾಲಕನಿಗೆ ಆದೇಶಿಸಬಹುದಾಗಿದೆ.

ಜುಲ್ಮಾನೆಯನ್ನು ಸಂದಾಯಮಾಡುವಂತೆ ಆದೇಶಿಸಬಹುದಾಗಿದೆ. ಮಾತ್ರವಲ್ಲದೆ ಆತನ ಸನ್ನಡತೆಯ ಪರಿವೀಕ್ಷಣೆ ಮೇಲೆ ಬಾಲಕನನ್ನು ಬಿಡುಗಡೆ ಮಾಡಲು 3ವರ್ಷಗಳ ಮೀರದ ಅವಧಿಯವರೆಗೆ ಆತನ ತಂದೆ ತಾಯಿಯರು ಅಥವಾ ಪಾಲಕ ಸೂಕ್ತ ಮುಚ್ಚಳಿಕೆ ಪತ್ರವನ್ನು ಬಾಲ ನ್ಯಾಯಮಂಡಲಿಗೆ ಬರೆದುಕೊಡಬೇಕಾಗುತ್ತದೆ.





































error: Content is protected !!
Scroll to Top