ಕಾರ್ಕಳ : ಆಳ್ವಾಸ್ ನುಡಿಸಿರಿ-ವಿರಾಸತ್ ಕಾರ್ಕಳ ಘಟಕದ ಆಶ್ರಯದಲ್ಲಿ ಕಾರ್ಕಳದ ಸ್ವರಾಜ್ ಮೈದಾನದಲ್ಲಿ ನ.29ರಂದು ಸಂಜೆ 5:45 ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಪೂರ್ವ ತಯಾರಿ ಭರದಿಂದ ಸಾಗುತ್ತಿದ್ದು ಇಂದು ನಗರ ಭಾಗದಲ್ಲಿ ಸಮಿತಿ ವತಿಯಿಂದ ಆಮಂತ್ರಣ ಪತ್ರಿಕೆ ಹಂಚಿಕೆ ನಡೆಯಿತು.
ಆಳ್ವಾಸ್ ನುಡಿಸಿರಿ-ವಿರಾಸತ್ ಕಾರ್ಕಳ ಘಟಕದ ಅಧ್ಯಕ್ಷ ವಿಜಯ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಅಂಬರೀಶ್, ಸಮಿತಿಯವರಾದ ಬಾಲಕೃಷ್ಣ ಶೆಟ್ಟಿ, ನಿರಂಜನ್ ಜೈನ್, ಪ್ರಕಾಶ್ ರಾವ್, ಅವಿನಾಶ್, ಗಣೇಶ್ ಜಾಲ್ಸೂರು, ವೀಣಾ ಭಂಡಾರಿ, ರುಚಿಕಾ ರೋಶನ್, ದೀಪಾ ಶೆಟ್ಟಿ, ಶುಣಾ ಬಂಗೇರ, ಪ್ರಫುಲ್ಲಾ ಶೆಟ್ಟಿ, ಸ್ವಾತಿ ಸುವರ್ಣ, ಪ್ರೀತಿಕಾ ಜೈನ್, ಮಮತಾ ಎಸ್. ರೈ, ದಿವಾಕರ್, ಸುಧೀಂದ್ರ ಶಾಂತಿ, ಡಾ. ರಾಮಕೃಷ್ಣ ಶೆಟ್ಟಿ, ಸುಪ್ರೀತಾ ಎಸ್.ಡಿ. ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
15.94 ಎಕರೆ ವೀಸ್ತೀರ್ಣವಿರುವ ಸ್ವರಾಜ್ ಮೈದಾನದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 500ಕ್ಕೂ ಅಧಿಕ ವಿದ್ಯಾರ್ಥಿ ಕಲಾವಿದರಿಂದ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಗಾಗಿ 15000ಕ್ಕೂ ಅಧಿಕ ಆಸನದ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಮೈದಾನದಲ್ಲಿ ಸ್ಟೇಜ್ ಸೆಟ್ಟಿಂಗ್ ಕೆಲಸ ಪ್ರಾರಂಭಗೊಂಡಿದೆ.


















