ರಂಗನಪಲ್ಕೆಯ ಅಕ್ಷಯ್‌ ಪೂಜಾರಿ ಅವರಿಗೆ ಕರ್ನಾಟಕ ಸಿರಿಗನ್ನಡ ರಾಜ್ಯ ಪ್ರಶಸ್ತಿ

ಕಾರ್ಕಳ : ದಾವಣಗೆರೆಯ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ಕೊಡಮಾಡುವ ಕರ್ನಾಟಕ ಸಿರಿಗನ್ನಡ ರಾಜ್ಯ ಪ್ರಶಸ್ತಿಗೆ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ರಂಗನಪಲ್ಕೆಯ ಅಕ್ಷಯ್‌ ಪೂಜಾರಿ ಭಾಜನರಾಗಿದ್ದಾರೆ. ನ.23ರಂದು ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾ ಕುಂಚ ಸಂಸ್ಥೆಯ ಸಂಸ್ಥಾಪಕ ಗಣೇಶ್ ಶೆಣೈ ಸಾಲಿಗ್ರಾಮ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭ ಹೆಬ್ರಿ ತಾಲೂಕು ಪಂಚಾಯತ್‌ ನಿಕಟ ಪೂರ್ವ ಅಧ್ಯಕ್ಷ ರಮೇಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಅಕ್ಷಯ್ ರಂಗನಪಲ್ಕೆಯ ಅಪ್ಪು ಪೂಜಾರಿ ಮತ್ತು ಸುಜಾತ ದಂಪತಿಯ ಪುತ್ರರಾಗಿದ್ದಾರೆ.









































































































error: Content is protected !!
Scroll to Top