ಜೇಸಿಐ ವತಿಯಿಂದ ಪೊಲೀಸ್ ಠಾಣೆಗೆ ಟ್ರಾಫಿಕ್‌ ಪೊಲೀಸ್‌ ಸೈನ್‌ ಬೋರ್ಡ್‌ ಹಸ್ತಾಂತರ

ಕಾರ್ಕಳ : ಜೇಸಿಐ ಕಾರ್ಕಳ ವತಿಯಿಂದ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗೆ ನ. 10ರಂದು‌ ಟ್ರಾಫಿಕ್‌ ಪೊಲೀಸ್‌ ಸೈನ್‌ ಬೋರ್ಡ್ ಹಸ್ತಾಂತರಿಸಲಾಯಿತು. ಈ ವೇಳೆ ಮಾತನಾಡಿದ ಎಸ್‌ಐ ಪ್ರಸನ್ನ ಎಂ. ಎಸ್., ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಟ್ರಾಫಿಕ್‌ ಸೈನ್‌ ಬೋರ್ಡ್‌ ಅಳವಡಿಸಲಾಗುತ್ತಿದೆ. ರಾತ್ರಿ ಸಮಯದಲ್ಲಿ ಪೊಲೀಸ್ ನಿಂತಿರುವಂತೆ ಇರುವ ಈ ಪ್ರತಿಕೃತಿಯಿಂದ ಅಪಘಾತಕ್ಕೂ ಕಡಿವಾಣದೊಂದಿಗೆ ಚಾಲಕರಿಗೆ ಜಾಗೃತಿ ಹಾಗೂ ಅರಿವು ಮೂಡಿಸುವ ಕಾರ್ಯವಾಗಲಿದೆ. ಇಂತಹ ಒಂದು ವಿನೂತನ ಪರಿಕಲ್ಪನೆಯೊಂದಿಗೆ ಬೋರ್ಡ್‌ ಕೊಡುಗೆಯಾಗಿ ನೀಡಿರುವ ಜೇಸಿಐ ಸಂಸ್ಥೆಗೆ ಅಭಿನಂದನೆಗಳು ಎಂದರು.
ಜೇಸಿಐ ಪೂರ್ವ ವಲಯ ಅಧಿಕಾರಿ ಪದ್ಮಪ್ರಸಾದ್ ಜೈನ್ ಮಾತನಾಡಿ, 52 ವರ್ಷಗಳ ಇತಿಹಾಸ ಹೊಂದಿರುವ ಜೇಸಿಐ ಕಾರ್ಕಳ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಬಂದಿದೆ. ಇದೀಗ ಪೊಲೀಸ್‌ ಸೈನ್‌ ಬೋರ್ಡ್‌ ಸ್ಥಾಪನೆ ಮೂಲಕ ಸಂಚಾರ ನಿಯಮದ ಬಗ್ಗೆ ಒತ್ತು ನೀಡುವ ಕಾರ್ಯ ಮಾಡಿರುವುದು ಉತ್ತಮ ವಿಚಾರವೆಂದರು.
ಜೇಸಿಐ ಕಾರ್ಕಳದ ಅಧ್ಯಕ್ಷೆ ಶ್ವೇತಾ ಎಸ್. ಜೈನ್, ಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್, ನಿಕಟ ಪೂರ್ವ ಅಧ್ಯಕ್ಷ ಪ್ರಚಿತ್ ಕುಮಾರ್, ಕಾರ್ಯದರ್ಶಿ ಸುಶ್ಮಿತಾ, ರೇವತಿ ಶೆಟ್ಟಿ, ವೃಷಭ ರಾಜ್ ಜೈನ್, ಸಂದೀಪ್ ಜೈನ್, ಕಾರ್ಕಳ ಪೊಲೀಸ್ ಇಲಾಖಾ ಸಿಬ್ಬಂದಿ ಉಪಸ್ಥಿತರಿದ್ದರು.









































































































error: Content is protected !!
Scroll to Top