ಬೀದಿನಾಯಿಗಳ ಕಾಟಕ್ಕೆ ಕಡಿವಾಣ ಹಾಕಿದ ಚಿರತೆ !

ಕಾರ್ಕಳ : ತೆಳ್ಳಾರು ರಸ್ತೆ ಸೇರಿದಂತೆ ಕಾರ್ಕಳ ನಗರದ ವಿವಿಧ ಜಂಕ್ಷನ್‌ಗಳಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ಅವುಗಳ ಆಟ, ಕಾಟದಿಂದ ಸಾರ್ವಜನಿಕರಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಬೆಳಿಗ್ಗೆ ವಾಕಿಂಗ್‌ ಹೋಗುವವರು, ಪಾದಚಾರಿಗಳು, ದ್ವಿಚಕ್ರ ಸವಾರರು ಈ ನಾಯಿಗಳಿಂದಾಗಿ ನೆಮ್ಮದಿಯಾಗಿ ಓಡಾಡಲು ಸಾಧ್ಯವಾಗದೇ ಹೈರಾಣಾಗಿದ್ದರು. ಆದರೆ, ಕಳೆದ ಮೂರು ದಿನಗಳಿಂದ ತೆಳ್ಳಾರು ರಸ್ತೆಯಲ್ಲಿ ಬೀದಿನಾಯಿಗಳ ಓಡಾಟವಿಲ್ಲ. ಕಾರಣ ಬೀದಿನಾಯಿಗಳ ಹಿಂಡಿಗೆ ಚಿರತೆ ದಾಳಿ ಮಾಡಿ, ಒಂದು ನಾಯಿಯನ್ನು ಕೊಂದು ಹಾಕಿತ್ತು. ಆ ದೃಶ್ಯವನ್ನು ನೋಡಿ ದಿಕ್ಕಾಪಾಲಾಗಿರುವ ನಾಯಿಗಳು ಬಳಿಕ ಭಯದಿಂದ ತೆಳ್ಳಾರು ರಸ್ತೆಯತ್ತ ಬರಲೇ ಇಲ್ಲ ಎನ್ನುತ್ತಾರೆ ಸ್ಥಳೀಯರು.

ತೆಳ್ಳಾರು ರಸ್ತೆಯಲ್ಲಿ ನಾಯಿಗಳ ಹಿಂಡು ಕಂಡಿರುವ ಚಿರತೆ ಮತ್ತೆ ದಾಳಿ ಮಾಡಲಿದೆ ಎಂಬ ಆತಂಕದಲ್ಲಿರುವ ಇಲ್ಲಿನ ನಿವಾಸಿಗಳು ರಾತ್ರಿ ವೇಳೆ ಮನೆಯಿಂದ ಹೊರಬರುತ್ತಿಲ್ಲ.

ಕಳೆದ ನಾಲ್ಕೈದು ತಿಂಗಳ ಹಿಂದೆ ರಾಮಸಮುದ್ರದ ಪರಿಸರ, ಬಂಡಿಮಠ, ಪೆರ್ವಾಜೆ, ಶ್ರೀ ವೆಂಕಟರಮಣ ದೇವಸ್ಥಾನದ ಪರಿಸರದಲ್ಲಿ ಚಿರತೆ ಉಪಟಳವಿತ್ತು. ಇನ್ನು ಗ್ರಾಮೀಣ ಪ್ರದೇಶವಾದ ಕಣಜಾರು, ಪಳ್ಳಿ, ನೀರೆ ಬೈಲೂರು, ಕೌಡೂರು, ಯರ್ಲಪಾಡಿ, ಕಾಂತಾವರ, ಬೆಳ್ಮಣ್‌, ಮುಡಾರು, ಮುಂಡ್ಲಿ, ಕೆರ್ವಾಶೆ, ಹೆಬ್ರಿ ತಾಲೂಕಿನ ವರಂಗ, ಮುನಿಯಾಲು, ಅಂಡಾರು ಪರಿಸರದಲ್ಲಿ ಆಗೊಮ್ಮೆ ಈಗೊಮ್ಮೆ ಚಿರತೆಗಳು ಕಾಣಸಿಗುವುದು ಸಾಮಾನ್ಯವಾಗಿದೆ. ಜಾನುವಾರು, ನಾಯಿ, ಬೆಕ್ಕುಗಳ ಬೇಟೆಗಾಗಿ ಚಿರತೆಗಳು ಕಾಡಿನಿಂದ ನಾಡಿನತ್ತ ಬರುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.















































































error: Content is protected !!
Scroll to Top