ಮಹಿಳಾ ವಿಶ್ವಕಪ್‌ – ಭಾರತ ಚೊಚ್ಚಲ ಬಾರಿಗೆ ಚಾಂಪಿಯನ್

ಮುಂಬೈ : ಭಾರತ ವನಿತೆಯರ ತಂಡ ಐಸಿಸಿ ವಿಶ್ವಕಪ್‌ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.‌ ನವಿ ಮುಂಬೈ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾರತ 7 ವಿಕೆಟ್ ಕಳೆದುಕೊಂಡು 298 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ 45.3 ಓವರ್ ಗಳಲ್ಲಿ 246 ರನ್ ಗಳಿಸಲಷ್ಟೇ ಶಕ್ತವಾಯಿತು. ಆತಿಥೇಯ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ ಭಾರಿ ಅಂತರದ ಗೆಲುವು ಸಾಧಿಸಿತು. ಎರಡು ಬಾರಿ ಏಕದಿನ ವಿಶ್ವಕಪ್ ಫೈನಲ್ ಪ್ರವೇಶಿಸಿ ಪರಾಭವಗೊಂಡಿದ್ದ ಭಾರತ ವನಿತೆಯರ ತಂಡ 3ನೇ ಪ್ರಯತ್ನದಲ್ಲಿ ಇತಿಹಾಸ ನಿರ್ಮಿಸಿದೆ.

ಭಾರತದ ಪರ ಶಫಾಲಿ ವರ್ಮಾ 7 ಫೋರ್‌ 2 ಸಿಕ್ಸರ್‌ನೊಂದಿಗೆ 87 (78 ಎಸೆತ)‌ ರನ್‌, ದೀಪ್ತಿ ಶರ್ಮಾ 3 ಫೋರ್‌ 1 ಸಿಕ್ಸರ್‌ನೊಂದಿಗೆ 58 (58 ಎಸೆತ), ಸ್ಮೃತಿ ಮಂದಾನ 8 ಬೌಂಡರಿಯೊಂದಿಗೆ 45 (58 ಎಸೆತ) ರನ್‌ ಬಾರಿಸಿದರು. ಬೌಲಿಂಗ್‌ನಲ್ಲೂ ಮಿಂಚಿದ ದೀಪ್ತಿ 5 ಮತ್ತು ಶಫಾಲಿ 2 ವಿಕೆಟ್‌ ಕಿತ್ತರು.

ಬೃಹತ್ ಗುರಿಯನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ತಂಡ ಉತ್ತಮ ಆರಂಭ ಪಡೆಯಿತು. ತಂಡದ ಪರ ಅಮೋಘ ಶತಕ ದಾಖಲಿಸಿದ ನಾಯಕಿ ಲಾರಾ ವೋಲ್ಟಾರ್ಟ್ 1 ಸಿಕ್ಸ್‌, 11 ಫೋರ್‌ನೊಂದಿಗೆ 101 (98 ಎಸೆತ) ಕಲೆಹಾಕಿದರು. ಬ್ರಿಟ್ಸ್ (23), ಲೂಸ್ (25), ಡರ್ಕ್ ಸೆನ್ (35) ರನ್‌ ಗಳಿಸಿ ಸಾಥ್ ನೀಡಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಲಾರಾ ಅವರಿಂದ ಸಾಧ್ಯವಾಗಿಲ್ಲ.















































































error: Content is protected !!
Scroll to Top