ಕಾರ್ಕಳ ಬಾಹುಬಲಿಯ ಮಹಾಮಸ್ತಕಾಭಿಷೇಕ – ಪೂರ್ವಭಾವಿ ಸಭೆ

ಕಾರ್ಕಳ : 2027ರ ಜನವರಿಯಲ್ಲಿ ನಡೆಯಲಿರುವ ಕಾರ್ಕಳ ಬಾಹುಬಲಿಯ ಮಹಾಮಸ್ತಕಾಭಿಷೇಕ ಹಿನ್ನೆಲೆಯಲ್ಲಿ ನ. 1ರಂದು ಬಾಹುಬಲಿ ಪ್ರವಚನ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ದಾನಶಾಲೆ ಜೈನಮಠದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಜೈನ ಜೀರ್ಣೋದ್ಧಾರಕ ಸಂಘದ ಕಾರ್ಯಾಧ್ಯಕ್ಷ, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ. ಎಂ. ಎನ್.‌ ರಾಜೇಂದ್ರ ಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತಿದ್ದು, ಈ ಹಿಂದೆ 2015ರಲ್ಲಿ ವೈಭವದೊಂದಿಗೆ ಜರುಗಿತ್ತು. ಮುಂದಿನ ಮಸ್ತಕಾಭಿಷೇಕವನ್ನು ಡಾ. ಎಂ.ಎನ್.‌ ರಾಜೇಂದ್ರ ಕುಮಾರ್‌ ಅವರ ನೇತೃತ್ವದಲ್ಲಿ ನಡೆಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಾಜಿ ಸಚಿವ ಅಭಯಚಂದ್ರ ಜೈನ್‌, ಪಡುಬಿದ್ರೆಬೀಡು ಕಿನ್ಯಕ್ಕ ಬಲ್ಲಾಳ ಅರಸರು, ಖಾವಂದರ ಪ್ರತಿನಿಧಿ ಎ.ವಿ. ಶೆಟ್ಟಿ, ಸಮಾಜದ ಹಿರಿಯರಾದ ಅನಂತರಾಜ್‌ ಪೂವಣಿ, ಸೂರಜ್‌ ಜೈನ್‌, ಅವಿಭಜಿತ ಜಿಲ್ಲೆಯ ಜೈನ ಬಾಂಧವರು ಉಪಸ್ಥಿತರಿದ್ದರು. ಅಂಡಾರು ಮಹಾವೀರ ಹೆಗ್ಡೆ ಸ್ವಾಗತಿಸಿ, ನಿವೃತ್ತ ಶಿಕ್ಷಕ ಯೋಗರಾಜ್‌ ಶಾಸ್ತ್ರಿ ನಿರೂಪಿಸಿದರು. ಮೋಹನ್‌ ಪಡಿವಾಳ್‌ ವಂದಿಸಿದರು.















































































error: Content is protected !!
Scroll to Top