ಕಾರ್ಕಳ : ಬಸ್‌ಗೆ ಓಮ್ಮಿ ಕಾರು ಡಿಕ್ಕಿಯಾಗಿ ಇಬ್ಬರು ಆಸ್ಪತ್ರೆ ದಾಖಲಾದ ಘಟನೆ ಅ. 29 ರಂದು ಹೆಬ್ರಿಯಲ್ಲಿ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಶಬ್ಬಿರ್ ಅಹ್ಮದ್ ಎಂಬವರು ಕೇರಳದಿಂದ ಬಸ್‌ನ್ನು ಖರೀದಿ ಮಾಡಿ ಶಿಕಾರಿಪುರಕ್ಕೆ ಕಾರ್ಕಳ –ಹೆಬ್ರಿ ಮಾರ್ಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಸಂಜೆ 7 ಗಂಟೆಗೆ ವರಂಗ ಪೇಟೆಯಿಂದ ಹೆಬ್ರಿ ಕಡೆ ಸಾಗುತ್ತಿದ್ದಾಗ ಎದುರಿನಲ್ಲಿ ಹೆಬ್ರಿ ಕಡೆಯಿಂದ ಬರತ್ತಿದ್ದ ಓಮ್ನಿ ಕಾರು ಡಿಕ್ಕಿಯಾಗಿದೆ. ಪರಿಣಾಮವಾಗಿ ಬಸ್ಸಿನ ಮುಂಭಾಗ ಜಖಂಗೊಂಡಿದ್ದು, ಓಮ್ನಿ ಕಾರಿನ ಚಾಲಕ ಹಾಗೂ ಅದರಲ್ಲಿದ್ದ ಮಹಿಳೆ ಗಾಯಗೊಂಡಿದ್ದಾರೆ. ಗಾಯಾಳುಗಳು ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಬಸ್‌ಗೆ ಓಮ್ನಿ ಕಾರು ಡಿಕ್ಕಿ – ಇಬ್ಬರು ಆಸ್ಪತ್ರೆ ದಾಖಲು


























