ಹೆಬ್ರಿ : ಮಟ್ಕಾ ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

ಹೆಬ್ರಿ : ವಿಜಯಲಕ್ಮೀ ಬಾರ್‌ ಆ್ಯಂಡ್ ರೆಸ್ಟೊರೆಂಟ್‌ ಮತ್ತು ಲಾಡ್ಜ್‌ ಮುಂಭಾಗದ ರಸ್ತೆ ಬದಿಯಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಮಟ್ಕಾ ಜುಗಾರಿ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಹೆಬ್ರಿ ಪೊಲೀಸ್‌ ಠಾಣೆಯ ಸಹಾಯಕ ಪೊಲೀಸ್‌ ಉಪನಿರೀಕ್ಷಕ ಪ್ರೀತಂಕುಮಾರ್‌ ಪಯಾಸ್‌ ಅ. 27ರಂದು ದಾಳಿ ನಡೆಸಿದ್ದಾರೆ. ಈ ವೇಳೆ ವಿಚಾರಿಸಿದಾಗ ಆರೋಪಿ ಉಡುಪಿಯ ಪುತ್ತೂರು ಗ್ರಾಮದ ಚೇತನ್‌ ಎಂದು ತಿಳಿದು ಬಂದಿದ್ದು, ಆತನ ಬಳಿ ಇದ್ದ ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ 880 ರೂ. ನಗದು ಹಾಗೂ ಆಟಕ್ಕೆ ಬಳಸಿದ ವಸ್ತುಗಳನ್ನು ಸ್ವಾಧಿನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









































































































error: Content is protected !!
Scroll to Top