ಅಭಿಷೇಕ್‌ ಆಚಾರ್ಯ ಪ್ರಕರಣ – ಡೆತ್‌ ನೋಟ್ ನಲ್ಲಿ ಉಲ್ಲೇಖಿಸಿರುವ ಆರೋಪಿಗಳನ್ನು ಬಂಧಿಸುವಂತೆ ಎಸ್‌ಪಿಗೆ ಶಾಸಕ ಸುನಿಲ್‌ ಪತ್ರ

ಕಾರ್ಕಳ : ಅಭಿಷೇಕ್‌ ಆಚಾರ್ಯ ಅವರ ಡೆತ್ ನೋಟ್ ಆಧರಿಸಿ ಅದರಲ್ಲಿ ಉಲ್ಲೇಖಿಸಿರುವ ವ್ಯಕ್ತಿಗಳು ಸಾಕ್ಷಿ ನಾಶ ಮಾಡುವ ಮೊದಲೇ ಅವರನ್ನು ಬಂಧಿಸಿ ನ್ಯಾಯ ಸಮ್ಮತ, ಪಾರದರ್ಶಕ ಹಾಗೂ ಸಮಗ್ರ ತನಿಖೆ ನಡೆಸುವಂತೆ ಕಾರ್ಕಳ ಶಾಸಕ ವಿ. ಸುನಿಲ್‌ ಕುಮಾರ್‌ ಅವರು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿರುತ್ತಾರೆ.
ಕಾರ್ಕಳ ನಿಟ್ಟೆ ಗ್ರಾಮದ ಪರಪ್ಪಾಡಿ ಅಭಿಷೇಕ್ ಆಚಾರ್ಯ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು ಅಲ್ಲಿಯೆ ಕೆಲಸ ಮಾಡುತ್ತಿದ್ದ ಯುವತಿಯ ಜೊತೆಗಿನ ಪ್ರೀತಿ ವಿಷಯದಲ್ಲಿ ಹಾಗೂ ಆಕೆಯ ಸ್ನೇಹಿತರ ಕಿರುಕುಳದ ಸಂಚಿನಿಂದ ಬೇಸತ್ತು ಬೆಳ್ಮಣ್ಣಿನ ಖಾಸಗಿ ಲಾಡ್ಜ್ ನಲ್ಲಿ 7 ಪುಟಗಳ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ಬೇಸರ ಹಾಗೂ ವಿಷಾದದ ಸಂಗತಿ.
ಮೃತ ಅಭಿಷೇಕ್ ಆಚಾರ್ಯ ಅವರ ಆತ್ಮಹತ್ಯೆ ಹಾಗೂ ಅದರ ಹಿಂದಿರುವ ಸಂಚಿನ ಕುರಿತು ಹಲವು ಅನುಮಾನಗಳಿದೆ. ಆತ್ಮಹತ್ಯೆಗೆ ಕಾರಣವೆಂದು ಹೇಳಲಾಗುವ ತಂಡವು ಹಲವರಿಗೆ ವಂಚಿಸಿರುವ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನವಿದೆ. ಮೃತನ ಪೋಷಕರು ಹಾಗೂ ಸಂಬಂಧಿಕರು ಕುಟುಂಬಕ್ಕೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದು, ಮಗನ ಅಸಹಜ ಸಾವಿನ ಕುರಿತು ನ್ಯಾಯ ಸಮ್ಮತ ತನಿಖೆಗೆ ಆಗ್ರಹಿಸಿರುತ್ತಾರೆ. ಮೃತ ಅಭಿಷೇಕ್ ಆಚಾರ್ಯ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ 7 ಪುಟಗಳ ಡೆತ್ ನೋಟ್ ಬರೆದಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ತನ್ನ ಸಾವಿನ ಕುರಿತು, ಆತನ ಗೆಳತಿ ಹಾಗೂ ಸ್ನೇಹಿತರಿಂದ ಆಗುತ್ತಿದ್ದ ಮಾನಸಿಕ ಕಿರುಕಳದ ಬಗ್ಗೆ ಸುದೀರ್ಘವಾಗಿ ಉಲ್ಲೇಖಿಸಿರುತ್ತಾರೆ. ಆ ನಿಟ್ಟಿನಲ್ಲಿ ತನಿಖೆ ನಡೆಸುವಂತೆ ಪತ್ರದಲ್ಲಿ ಸುನಿಲ್‌ ಕುಮಾರ್‌ ಆಗ್ರಹಿಸಿದ್ದಾರೆ.









































































































error: Content is protected !!
Scroll to Top