ಅಭಿಷೇಕ್‌ ಆತ್ಮಹತ್ಯೆ ಸಂಘಟಿತ ಅಪರಾಧ ಚಟುವಟಿಕೆಯ ಭಾಗ

ಕಾರ್ಕಳ : ನಿಟ್ಟೆಯ ಯುವಕ ಅಭಿಷೇಕ್‌ ಅವರ ಆತ್ಮಹತ್ಯೆ ಅತ್ಯಂತ ದುಃಖಕರ ಹಾಗೂ ಆತಂಕಕಾರಿ. ಅಭಿಷೇಕ್‌ ತನ್ನ ಸಾವಿನ ಮುನ್ನ ಬರೆದಿರುವ 7 ಪುಟಗಳ ಡೆತ್ ನೋಟ್‌ನಲ್ಲಿ ನಾಲ್ಕು ಜನರನ್ನು ತನ್ನ ಸಾವಿಗೆ ಹೊಣೆಗಾರರೆಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ಅಲ್ಲದೆ, ಸಂಬಂಧಿಸಿದ ದಾಖಲೆಗಳನ್ನು ತನ್ನ ಮೊಬೈಲ್ ಫೋನ್‌ನಲ್ಲಿ ಸಂಗ್ರಹಿಸಿರುವುದಾಗಿ ಬರೆದಿದ್ದಾನೆ. ಈ ವ್ಯಕ್ತಿಗಳು ಅಭಿಷೇಕ್‌ ಅವರ ಖಾಸಗಿ ಚಿತ್ರಗಳು ಮತ್ತು ವೀಡಿಯೊಗಳ ಮೂಲಕ ಬ್ಲಾಕ್‌ಮೇಲ್ ಮಾಡಿ, ಹಣಕ್ಕಾಗಿ ಕಿರುಕುಳ ನೀಡಿ, ಕೊಲೆಗೈಯುವ ಬೆದರಿಕೆ ನೀಡಿದ್ದರೆಂಬ ವಿಷಯಗಳು ಸಹ ಬಹಿರಂಗವಾಗಿವೆ. ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಇಂತಹ ಪ್ರಕರಣಗಳು ಮುಂದೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಉಡುಪಿ-ದ. ಕ. ಜಿಲ್ಲೆ ವಿಶ್ವಕರ್ಮ ಒಕ್ಕೂಟ ಪ್ರತಿನಿಧಿ, ನಿಟ್ಟೆ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಹರ್ಷವರ್ಧನ್ ನಿಟ್ಟೆ ವಿನಂತಿಸಿದ್ದಾರೆ.

ಈ ಘಟನೆ ಸಾಮಾನ್ಯ ಆತ್ಮಹತ್ಯೆಯ ಪ್ರಕರಣವಲ್ಲ. ಇದು ಸಂಘಟಿತ ಅಪರಾಧ ಚಟುವಟಿಕೆಯ ಭಾಗವಾಗಿದ್ದು, ಯುವಕರನ್ನು ಬಯಲಿಗೆಳೆಯುವ ಗ್ಯಾಂಗ್ ಕಾರ್ಯನಿರ್ವಹಿಸುತ್ತಿದೆ ಎಂದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಅನೇಕ ಅಮಾಯಕ ಯುವಕರು ಈ ರೀತಿಯ ಕೃತ್ಯಗಳ ಬಲಿಪಶುಗಳಾಗುತ್ತಿರುವುದು ಕಳವಳಕಾರಿ ಸಂಗತಿ. ಈ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಿ, ಶೀಘ್ರ ಹಾಗೂ ಗಂಭೀರ ತನಿಖೆ ನಡೆಸಿ ಘಟನೆಯ ಹಿಂದೆ ಕಾರ್ಯನಿರ್ವಹಿಸುತ್ತಿರುವ ಸಂಪೂರ್ಣ ಜಾಲವನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹರ್ಷವರ್ಧನ್ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.















































































error: Content is protected !!
Scroll to Top