ಮಗಳನ್ನೇ ಕತ್ತು ಹಿಸುಕಿ ಹತ್ಯೆಗೈದ ತಾಯಿ – ಕಾರ್ಕಳದಲ್ಲೊಂದು ಭೀಭತ್ಸ ಕೃತ್ಯ

ಕಾರ್ಕಳ : ತಾಯಿಯೋರ್ವಳು ಮಗಳನ್ನೇ ಹತ್ಯೆಗೈದಿರುವ ಘಟನೆ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಕಾನಂಗಿಯಿಂದ ವರದಿಯಾಗಿದೆ. 17 ವರ್ಷದ ಶಿಫನಾಜ್‌ ಕೊಲೆಯಾದ ಯುವತಿ. ಸೆ. 20ರಂದು ಶಿಫನಾಜ್‌ ತನ್ನ ಸ್ನೇಹಿತನನ್ನು ಭೇಟಿಯಾಗಲು ಉಡುಪಿಗೆ ಹೋಗಿ ಬರುವುದಾಗಿ ತಾಯಿಯಲ್ಲಿ ಹೇಳಿದ್ದು, ಅದಕ್ಕೆ ತಾಯಿ ಗುಲ್ಜಾರ್‌ ಬಾನು (45) ನಿರಾಕರಿಸಿದ್ದಳು. ಇದರಿಂದ ತಾಯಿ ಹಾಗೂ ಮಗಳ ಮಧ್ಯೆ ಜಗಳವಾಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಮಗಳ ಕುತ್ತಿಗೆ ಬಿಗಿಹಿಡಿದು ಉಸಿರುಗಟ್ಟಿಸಿ ಶಿಫನಾಜ್‌ಳನ್ನು ಹತ್ಯೆ ಮಾಡಲಾಗಿದೆ.

ಆತ್ಮಹತ್ಯೆ ಪ್ರಕರಣ ದಾಖಲು
ಶಿಫನಾಜ್‌ ಸೆ. 20ರಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಶಿಫನಾಜ್‌ ತಂದೆ ಶೇಖ್‌ ಮುಸ್ತಾಫ್‌ ದೂರು ನೀಡಿದ್ದು, ಶಿಫನಾಜ್‌ ಆಕೆಯ ಸ್ನೇಹಿತ ಮಹಮ್ಮದ್‌ ಸಲೀಂನನ್ನು ಉಡುಪಿಯಲ್ಲಿ ಭೇಟಿಯಾಗಲು ಹೋಗುವುದಾಗಿ ತಾಯಿಯಲ್ಲಿ ಹೇಳಿರುತ್ತಾಳೆ. ಈ ವಿಚಾರವಾಗಿ ತಾಯಿ ಮಗಳ ಮಧ್ಯೆ ಜಗಳವಾಗಿದ್ದು ಕೋಪಗೊಂಡ ಶಿಫನಾಜ್‌ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದರು.

ಪೋಸ್ಟ್‌ ಮಾರ್ಟಂ
ಶಿಫನಾಜ್‌ ಸಾವು ಆತ್ಮಹತ್ಯೆಯಲ್ಲ. ಉಸಿರುಗಟ್ಟಿಸಿ ಆಕೆಯನ್ನು ಕೊಲೆ ಮಾಡಲಾಗಿದೆ ಎನ್ನುವ ವರದಿ ಪೋಸ್ಟ್‌ ಮಾರ್ಟಂ ತಿಳಿದುಬಂತು. ಸಾವಿನ ಸತ್ಯ ಸಂಗತಿ ಪೋಸ್ಟ್‌ ಮಾರ್ಟಂನಿಂದ ಬಹಿರಂಗಗೊಳ್ಳುತ್ತಿದ್ದಂತೆ ಗುಲ್ಜಾರ್‌ ಬಾನಳನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದರು. ಈ ವೇಳೆ ತಾನು ಕೊಲೆ ಮಾಡಿರುವ ವಿಚಾರ ಒಪ್ಪಿಕೊಂಡಿದ್ದಾಳೆ. ಅ. 2ರಂದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿ, ಬಳಿಕ ಮಂಗಳೂರು ಜೈಲಿಗಟ್ಟಿದ್ದಾರೆ.









































































































error: Content is protected !!
Scroll to Top