ಅ. 5 : ಬಜಗೋಳಿಯಲ್ಲಿ ಉಚಿತವಾಗಿ ಆರೋಗ್ಯ ತಪಸಣಾ ಶಿಬಿರ

ಕಾರ್ಕಳ : ಭಾರತೀಯ ಜನತಾ ಪಾರ್ಟಿ ಕಾರ್ಕಳ ಇದರ ಆಶ್ರಯದಲ್ಲಿ ಜಸ್ಟೀಸ್‌ ಕೆ. ಎಸ್.‌ ಹೆಗ್ಡೆ ಚಾರಿಟೇಬಲ್‌ ಆಸ್ಪತ್ರೆ ದೇರಳಕಟ್ಟೆ ಇವರ ಸಹಯೋಗದಲ್ಲಿ ತಜ್ಞ ವೈದ್ಯರಿಂದ ಅ. 5ರಂದು ಬೆಳಿಗ್ಗೆ 9.30ರಿಂದ ಬಜಗೋಳಿಯ ಶ್ರೀ ಸಾಯಿಭವನ ತುಡಾರು ಕಾಂಪ್ಲೆಕ್ಸ್‌ನಲ್ಲಿ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.

ಶಾಸಕ ವಿ. ಸುನಿಲ್‌ ಕುಮಾರ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಿಜಿಪಿ ಮಂಡಲಾಧ್ಯಕ್ಷ ನವೀನ್‌ ನಾಯಕ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮಿಯ್ಯಾರು ಮಹಾಶಕ್ತಿಕೇಂದ್ರದ ಅಧ್ಯಕ್ಷ ಪ್ರಕಾಶ್‌ ಬಲಿಪ, ಮುಡಾರು ಗ್ರಾಮ ಸಮಿತಿ ಅಧ್ಯಕ್ಷ ಸುರೇಶ್‌ ಸಾಲಿಯಾನ್‌, ಮಿಯಾರು ಗ್ರಾಮ ಸಮಿತಿಯ ಅಧ್ಯಕ್ಷ ಶರಣ್‌ ಕೆ. ಶೆಟ್ಟಿ, ನಲ್ಲೂರು ಗ್ರಾಮ ಸಮಿತಿ ಅಧ್ಯಕ್ಷ ಪವನ್‌ ಜೈನ್ ಹಾಗೂ ಮಾಳ ಗ್ರಾಮ ಸಮಿತಿ ಅಧ್ಯಕ್ಷ ಸುಧಾಕರ ಡೋಂಗ್ರೆ ಉಪಸ್ಥಿತರಿರಲಿದ್ದಾರೆ.

ಶಿಬಿರದಲ್ಲಿ ಸಾಮಾನ್ಯ ತಪಾಸಣೆ, ಕಿವಿ, ಮೂಗು, ಗಂಟಲು ತಪಾಸಣೆ, ಕಣ್ಣಿನ ಪರೀಕ್ಷೆ, ಎಲುಬು ಮತ್ತು ಕೀಲು ತಪಾಸಣೆ, ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ಹಾಗೂ ಲಭ್ಯವಿರುವ ಔಷಧಿಗಳನ್ನು ಉಚಿತವಾಗಿ ವಿತರಿಸಲಾಗುವುದು ಮತ್ತು ವೈದ್ಯರು ಸೂಚಿಸಿದವರಿಗೆ ಇಸಿಜಿ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9945867407 (ಪ್ರಕಾಶ್‌ ಬಲಿಪ), 9611825572 (ಸುಮಿತ್‌ ನಲ್ಲೂರು) 9738648592 (ರಜತ್)‌ ಅಥವಾ 9900782313 (ವಿನಯಾ ಡಿ. ಬಂಗೇರ) ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





























































































error: Content is protected !!
Scroll to Top