ಕಾರ್ಕಳ : ಜೆಸಿಐ ಭಾರತದ ಆದೇಶದಂತೆ ಜೆಸಿಐ ಕಾರ್ಕಳದಲ್ಲಿ ಸೆ. 9 ರಿಂದ 15ರವರೆಗೆ ಜೆಸಿಐ ಸಪ್ತಾಹ ನಡೆಯಲಿದೆ. ಇಂದು ಜೇಸಿ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೆಸಿಐ ಧ್ವಜದ ದ್ವಜಾರೋಹಣದೊಂದಿಗೆ ಜೆಸಿಐ ಕಾರ್ಕಳದ ಪೂರ್ವಾಧ್ಯಕ್ಷ ಶಶಿಧರ್ ಕೆ. ಸಪ್ತಾಹಕ್ಕೆ ಚಾಲನೆ ನೀಡಿದರು.
ಬಳಿಕ ಮ್ಯಾರಥಾನ್, ಪ್ರೆಸ್ ಮೀಟ್ ನಡೆಯಿತು. ಆರೋಗ್ಯ ತಪಾಸಣೆ, ತರಬೇತಿ ಕಾರ್ಯಕ್ರಮ, ಆಟೋಟ ಸ್ಪರ್ಧೆಗಳು, ಮನರಂಜನೆ ಕಾರ್ಯಕ್ರಮಗಳು, ವ್ಯವಹಾರ ಪ್ರಚಾರ ಕಾರ್ಯಕ್ರಮಗಳು, ಹಾಗೂ ಇನ್ನಿತರ ವಿಶೇಷ ಕಾರ್ಯಕ್ರಮಗಳನ್ನು ಒಂದು ವಾರಗಳ ಕಾಲ ನಿರಂತರವಾಗಿ ಮಾಡಲಾಗುತ್ತದೆ.
ವೇದಿಕೆಯಲ್ಲಿ ಜೆಸಿಐ ಕಾರ್ಕಳದ ಅಧ್ಯಕ್ಷೆ ಶ್ವೇತಾ ಎಸ್. ಜೈನ್, ಪೂರ್ವ ವಲಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ವಲಯ ನಿರ್ದೇಶಕ ವಿಘ್ನೇಶ್ ಪ್ರಸಾದ್, ಶಾಲಾ ಮುಖ್ಯ ಶಿಕ್ಷಕಿ ಸುರೇಖಾ ರಾಜ್, ನಿಕಟ ಪೂರ್ವ ಅಧ್ಯಕ್ಷ ಪ್ರಚಿತ್ ಕುಮಾರ್, ಕಾರ್ಯಕ್ರಮ ಸಂಯೋಜಕ ಸುಶಾಂತ್ ಶೆಟ್ಟಿ, ಕಾರ್ಯದರ್ಶಿ ಸುಶ್ಮಿತಾ ರಾವ್, ಲೇಡಿ ಜೆಸಿ ನಿರ್ದೇಶಕಿ ಶಾಹಿನ್ ರಿಜ್ವಾನ್ ಖಾನ್ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಜೇಸಿ ಸದಸ್ಯರು ಉಪಸ್ಥಿತರಿದ್ದರು.






















