ಶ್ವ ಶಾಲಾ‌ ಮಕ್ಕಳ ವಾಲಿಬಾಲ್ ಪಂದ್ಯ : ರಾಷ್ಟ್ರೀಯ ಅರ್ಹತಾ ತಂಡಕ್ಕೆ ಶಗುನ್ ಎಸ್‌. ವರ್ಮ ಹೆಗ್ಡೆ ಆಯ್ಕೆ

ಕಾರ್ಕಳ : ರಾಷ್ಟ್ರೀಯ ಸ್ಕೂಲ್ ಗೇಮ್ಸ್ ಫೆಡರೇಶನ್‌ನವರು ನಡೆಸುವ 15ರ ವಯೋಮಿತಿಯ ವಿಶ್ವಾಶಾಲಾ ಬಾಲಕಿಯರ ವಿಭಾಗದ ವಿಶ್ವ ವಾಲಿಬಾಲ್ ಪಂದ್ಯಾಟದ ರಾಷ್ಟ್ರೀಯ ಅರ್ಹತಾ ತಂಡಕ್ಕೆ ಕಾರ್ಕಳದ ಶಗುನ್‌ ಎಸ್‌. ವರ್ಮ ಹೆಗ್ಡೆ ಆಯ್ಕೆಯಾಗಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ರಾಷ್ಟ್ರೀಯ ತಂಡದ ಆಯ್ಕೆ ಶಿಬಿರದಲ್ಲಿ ಸುಮಾರು 200 ಸ್ಪರ್ಧಾಳುಗಳು ಸ್ಪರ್ಧಿಸಿದ್ದು, ಇದರಲ್ಲಿ 23 ಸ್ಪರ್ಧಾಳುಗಳು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದು, ಅವರಲ್ಲಿ ಶಗುನ್ ಎಸ್. ವರ್ಮ ಹೆಗ್ಡೆ ಎರಡನೆಯವರಾಗಿ ಆಯ್ಕೆಯಾದದ್ದಲ್ಲದೆ ಕರ್ನಾಟಕದಿಂದ ಏಕೈಕ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ. ಇದಕ್ಕೂ ಮೊದಲು ರಾಜ್ಯದಿಂದ ಅರ್ಹತಾ ಶಿಬಿರಕ್ಕೆ ಉಡುಪಿ ಜಿಲ್ಲೆಯಿಂದ ಏಕೈಕ ಆಟಗಾರಳಾಗಿ ಶಗುನ್ ವರ್ಮ ಆಯ್ಕೆಯಾಗಿದ್ದರು. ಈಗ ಕರ್ನಾಟಕದ ಎಂಟು ಸ್ಪರ್ಧಿಗಳಲ್ಲಿ ಶಗುನ್ ಎಸ್. ವರ್ಮ ರಾಷ್ಟೀಯ ತಂಡಕ್ಕೆ ಆಯ್ಕೆಯಾದ ರಾಜ್ಯದ ಏಕೈಕ ಆಟಗಾರ್ತಿಯಾಗಿದ್ದಾರೆ. ಅಂತರಾಷ್ಟ್ರೀಯ ಪಂದ್ಯವು ಡಿ. 4 ರಿಂದ 13ರವರೆಗೆ ಚೀನಾದ ಶಾಂಗ್ಲೋದಲ್ಲಿ ನಡೆಯಲಿದೆ.

ಶಗುನ್ ಎಸ್. ವರ್ಮ ಹೆಗ್ಡೆ ಕಲ್ಲೊಟ್ಟೆ ನಿವಾಸಿ ಸಂದೇಶ್ ವರ್ಮ ಹಾಗೂ ಶ್ರುತಿರಾಜ್ ದಂಪತಿಯ ಪುತ್ರಿ. ಕ್ರೈಸ್ಟ್‌ಕಿಂಗ್‌ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿಯ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಜೋಡುರಸ್ತೆ ಕೊರಚೊಟ್ಟು ಕ್ರೀಡಾಂಗಣದಲ್ಲಿ ಸಂತೋಷ್ ಡಿ’ಸೋಜಾ, ಜೀವನ್ ಡಿ’ ಸಿಲ್ವಾ ಹಾಗೂ ಜೈರಾಜ್ ಪೂಜಾರಿ ಇವರಿಂದ ಕ್ರೀಡಾ ತರಬೇತಿಯನ್ನು ಪಡೆದಿರುತ್ತಾರೆ.









































































































error: Content is protected !!
Scroll to Top