ಕಾರಿಗೆ ಪಿಕಪ್‌ ಡಿಕ್ಕಿ – ಮಹಿಳೆಗೆ ಗಾಯ

ಹೆಬ್ರಿ : ಕಾರಿಗೆ ಪಿಕಪ್‌ ಡಿಕ್ಕಿಯಾದ ಪರಿಣಾಮವಾಗಿ ಕಾರಿನಲ್ಲಿದ್ದ ಮಹಿಳೆ ಗಾಯಗೊಂಡಿರುವ ಘಟನೆ ಆ. 29ರಂದು ನಾಡ್ಪಾಲು ಗ್ರಾಮದ ಆಗುಂಬೆ ತಿರುವಿನಲ್ಲಿ ಸಂಭವಿಸಿದೆ. ಶಿವಮೊಗ್ಗದ ಪ್ರಸನ್ನ ಅವರು ಕಾರಿನಲ್ಲಿ ತನ್ನ ತಾಯಿ ಪುಷ್ಪಾ ಮತ್ತು ತಂಗಿ ಲತಾ ಅವರನ್ನು ಕರೆದುಕೊಂಡು ಮಣಿಪಾಲ ಆಸ್ಪತ್ರೆಗೆ ಬಂದು ವಾಪಾಸು ಶಿವಮೊಗ್ಗಕ್ಕೆ ಹೋಗುತ್ತಿರುವಾಗ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಆಗುಂಬೆ ತಿರಿವಿನಲ್ಲಿ ಎದುರಿನಿಂದ ಬಂದ ಪಿಕಪ್‌ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಪುಷ್ಪಾ ಅವರ ತಲೆಗೆ ಗಾಯವಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top