ಕ್ರಿಮಿನಲ್ ಅಪರಾಧಗಳ ವಿಚಾರಣೆ-ಡಿಎನ್‌ಎ ಮತ್ತು ಧ್ವನಿ ವಿಶ್ಲೇಷಣೆಯ ಮಹತ್ವ

ಅಪರಾಧಗ ಬಗ್ಗೆ ವೈಜ್ಞಾನಿಕವಾಗಿ ತನಿಖೆಯನ್ನು ನಡೆಸುವಾಗ ಅಪರಾಧದ ಸ್ವರೂಪಕ್ಕೆ ಅನುಗುಣವಾಗಿ ಕೆಲವು ಸಂದರ್ಭದಲ್ಲಿ ಡಿಎನ್‌ಎ ಮತ್ತು ಧ್ವನಿ ವಿಶ್ಲೇಷಣೆಯು ಬಹಳ ಮಹತ್ವವನ್ನು ಹೊಂದಿರುತ್ತದೆ. ಡಿಎನ್‌ಎ ಪರೀಕ್ಷೆಯ ಫಲಿತಾಂಶವು ವಿಶಿಷ್ಟವಾದ ರೀತಿಯಲ್ಲಿ ಒಬ್ಬ ವ್ಯಕ್ತಿಯನ್ನು ಗುರುತಿಸುತ್ತದೆ. ಅದೇ ರೀತಿಯಾಗಿ ಧ್ವನಿ ವಿಶ್ಷೇಷಣೆಯು, ವಾಕ್ ಗುರುತಿಸುವಿಕೆಯಂತಹ ಭಾಷಾ ಅಡಕಗಳನ್ನು ಹೊರತುಪಡಿಸಿದ ಉದ್ದೇಶಗಳಿಗಾಗಿ ವಾಕ್ ಶಬ್ಧಗಳ ಒಂದು ಅಧ್ಯಯನವಾಗಿದೆ. ಡಿಎನ್‌ಎ ಪರೀಕ್ಷೆಯು ಸಂಶೋಧನೆಯಲ್ಲಿ ಒಂದು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅದು ವೈದ್ಯಕೀಯ, ಕೃಷಿ, ಅನುವಂಶೀಯತೆ, ವಿಧಿ ವಿಜ್ಞಾನ ಮತ್ತು ಇನ್ನೂ ಮುಂತಾದಂತಹ ಇತರ ಕ್ಷೇತ್ರಗಳ ಪ್ರಧಾನ ಆಧಾರವಾಗಿ ಪರಿಣಮಿಸುತ್ತದೆ. ಡಿಎನ್‌ಎ ಮಾನವನ ಜೀವಕೋಶಗಳು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಅಗತ್ಯವಾಗಿದೆ. ವಾಸ್ತವವಾಗಿ, ಡಿಎನ್‌ಎಯನ್ನು ಪೋಷಕಾಂಶಗಳ ಮತ್ತು ಇತರ ಜೀವಕೋಶಗಳ ಘಟಕಗಳ ಪೂರೈಕೆಗಾಗಿ ಅಗತ್ಯವಾದ ಮಾಹಿತಿಯನ್ನು ಧಾರಣ ಮಾಡಿರುವ ಒಂದು ನೀಲಿ ನಕ್ಷೆ ಅಥವಾ ಅಡಿಪಾಯದಂತೆ ಪರಾಮರ್ಶೆ ಮಾಡಲಾಗಿದೆ. ಡಿಎನ್‌ಎ ಪರೀಕ್ಷೆಯ ಪ್ರಾಮುಖ್ಯತೆಯನ್ನು ಸಂಶೋಧನೆ, ವೈದ್ಯಕೀಯ ಮತ್ತು ನ್ಯಾಯಿಕ ದೃಷ್ಟಿಕೋನಗಳಿಂದ ಅರ್ಥ ಮಾಡಿಕೊಳ್ಳಬಹುದು.

ಡಿಎನ್‌ಎ ಪರೀಕ್ಷೆಯಿಂದ ಹಲವಾರು ಅಪರಾಧಿಕ ಪ್ರಕರಣಗಳನ್ನು ಬಗೆಹರಿಸಬಹುದು, ಸಾಮಾನ್ಯವಾಗಿ ಕ್ರಿಮಿನಲ್ ಪ್ರಕರಣದ ತನಿಖೆಯ ಸಮಯ ವಿಧಿ ವಿಜ್ಞಾನ ತನಿಖೆದಾರರು ಅಪರಾಧವು ನಡೆದ ಸ್ಥಳದಿಂದ ರಕ್ತ, ಕೂದಲು ಅಥವಾ ಜೀವಕೋಶಗಳ ಮಾದರಿಗಳನ್ನು ಪಡೆದುಕೊಳ್ಳುತ್ತಾರೆ. ಎರಡನೆಯದಾಗಿ, ಪ್ರಯೋಗಾಲಯದ ತಂತ್ರಜ್ಞರು ಅತ್ಯಂತ ಸುಲಭವಾಗಿ ಅಪರಾಧದಲ್ಲಿ ಭಾಗಿಯಾದ ವ್ಯಕ್ತಿಗಳ ಗುರುತನ್ನು ಪರಿಶೀಲಿಸುತ್ತಾರೆ. ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ಡಿಎನ್‌ಎ ಪರೀಕ್ಷೆಯ ಫಲಿತಾಂಶವನ್ನು ಒಂದು ಸಾಕ್ಷ್ಯಾಧಾರದ ಒಂದು ಭಾಗವಾಗಿ ಅಂಗೀಕರಿಸಬೇಕಾಗುತ್ತದೆ. ಆ ಫಲಿತಾಂಶದಿಂದ, ನ್ಯಾಯಿಕ ಮತ್ತು ಪೋಲಿಸು ಪದ್ಧತಿಗಳು ಒಂದು ತೀರ್ಪನ್ನು ಪಡೆಯುವುದಕ್ಕಾಗಿ ಡಿಎನ್‌ಎ ಕೈಬೆರಳು ಗುರುತುಗಳು ವಿಶ್ವಾಸಾರ್ಹತೆ ಮತ್ತು ಬಲದ ಮೇಲೆ ಆಧಾರಪಟ್ಟಿರುತ್ತದೆ.

ಧ್ವನಿ ವಿಶ್ಷೇಷಣೆಯು ವಾಕ್ ಶಬ್ಧಗಳ ಒಂದು ಅಧ್ಯಯನವಾಗಿದೆ. ಅಂತಹ ಅಧ್ಯಯನಗಳು ಧ್ವನಿಯ ವೈದ್ಯಕೀಯ ವಿಶ್ಷೇಷಣೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಒಳಗೊಂಡಿರುತ್ತವೆ. ಪ್ರತಿಕೂಲ ಸ್ಥಿತಿಯಲ್ಲಿ ಕೆಲವರು ಮಾತನಾಡುವ ವ್ಯಕ್ತಿಗಳ ಭಾವನಾತ್ಮಾಕ ಸ್ಥಿತಿಯನ್ನು ಧ್ವನಿಯ ಒತ್ತಡದ ವಿಶ್ಷೇಷಣೆಯೊಂದಿಗೆ ಉಪಯೋಗಿಸಿ ದೃಢೀಕರಿಸಬಹುದಾಗಿದೆ. ವೈದ್ಯಕೀಯ ಧ್ವನಿ ವಿಶ್ಷೇಷಣೆಯಲ್ಲಿ, ಮತ್ತೊಂದು ಕ್ರಿಯಾತ್ಮಕ ಸಂಶೋಧನೆಯ ವಿಷಯವೆಂದರೆ, ಧ್ವನಿ ಹೊರೆಯ ಮೌಲ್ಯ ಮಾಪನ ಒಂದು ಸುಧೀರ್ಘ ಕಾಲದವರೆಗೆ ಮಾತನಾಡಿದ (ಭಾಷಣ)ಒಬ್ಬ ವ್ಯಕ್ತಿಯ ಧ್ವನಿ ತಂತುಗಳು ಆಯಾಸದಿಂದ ವೇದನೆಗೆ ಒಳಗಾಗುತ್ತವೆ. ಅಂದರೆ ಮಾತನಾಡುವ ಕಲಾಪವು ಧ್ವನಿ ತಂತುಗಳ ಮೇಲೆ ಹೆಚ್ಚಿನ ಹೊರೆಯನ್ನು ಹೇರುತ್ತದೆ ಮತ್ತು ಜೀವಕೋಶಗಳಿಗೆ ಆಯಾಸವನ್ನುಂಟು ಮಾಡುತ್ತವೆ. ಈ ಕಾರಣದಿಂದಾಗಿ ಯಾವುದೇ ಅಪರಾಧಿ ಮತ್ತು ಅಪರಾಧದ ನಡುವಿನ ಭೌತಿಕ ಸುಳಿವನ್ನು ಸಂಗ್ರಹಿಸುವ ಉದ್ದೇಶದಿಂದ ಪೋಲಿಸರು ಅಪರಾಧ ನಡೆದ ಸ್ಥಳವನ್ನು ಸಂರಕ್ಷಿಸಿ ಅಪರಾಧದ ಸ್ಥಳದಲ್ಲಿ ಲಭಿಸಬಹುದಾದ ಭೌತಿಕ ಸುಳಿವುಗಳನ್ನು ಕಲೆ ಹಾಕಿ ವೈಜ್ಞಾನಿಕ ವಿಶ್ಷೇಷಣೆ ಮೂಲಕ ಅರೋಪಿಯ ವಿರುದ್ದ ಸಾಕ್ಷ್ಯಾಧಾರವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ.









































































































error: Content is protected !!
Scroll to Top