ಶ್ರೀಸಾಯಿ ಈಶ್ವರ್ ಗುರೂಜಿ ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನ ಭೇಟಿ
ಕಾರ್ಕಳ : ನೂರೆಂಟು ದಿನ ನೂರೆಂಟು ಮಠ-ಮಂದಿರಗಳ ಭೇಟಿ ಸಂಕಲ್ಪದ ದ್ವಿತೀಯ ವರ್ಷದ ಅಂಗವಾಗಿ ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಆ. 21ರಂದು ಮುಂಜಾನೆ 9.15ಕ್ಕೆ ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಶ್ರೀ ಸಾಯಿ ಈಶ್ವರ್ ಭೇಟಿ ನೀಡಿದರು. ಸತ್ಯ-ಧರ್ಮದ ನಾಡಿನಲ್ಲಿ ಜ್ಞಾನದ ನಡೆಯ ಕಾರ್ಯಕ್ರಮದ ಜೊತೆಗೆ ರಾಷ್ಟ್ರ, ಧರ್ಮ ಹಾಗೂ ಯೋಧರು ಅವರ ಕುಟುಂಬದ ರಕ್ಷಣೆ, ಹಿಂದೂಗಳ ಒಗ್ಗಟ್ಟು ಮತ್ತು ಅವರ ರಕ್ಷಣೆಯೊಂದಿಗೆ ಶ್ರೀಕೃಷ್ಣ ಜನ್ಮ ಭೂಮಿ ಮುಕ್ತಿಗಾಗಿ ನಡೆಯುವ ಹೋರಾಟದ ಬಗ್ಗೆ ಜನಜಾಗೃತಿ ಮೂಡಿಸುವುದರ ಜೊತೆಗೆ ಸಂಕಲ್ಪಿತ ಪ್ರಾರ್ಥನೆಯನ್ನು ನೆರವೇರಿಸಲು ಗುರೂಜಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಶುಭಾಶೀರ್ವಚನ ನೀಡಿದರು.

ಬಳಿಕ ಕ್ಷೇತ್ರದ ವತಿಯಿಂದ ಪ್ರಧಾನ ಅರ್ಚಕರು ವಿಠಲ್ ಪುರೋಹಿತ್ ಪ್ರಾರ್ಥನೆಯನ್ನು ನೆರವೇರಿಸಿ, ಆಡಳಿತ ಮೊಕ್ತೇಸರಾದ ಶಿಲ್ಪಿ ರಾಮಚಂದ್ರ ಆಚಾರ್ಯ ಮತ್ತು ಜೊತೆ ಮೊಕ್ತೇಸರರು ಪಿ. ರವಿ ಆಚಾರ್ಯ ಗುರೂಜಿ ಅವರಿಗೆ ಫಲನ್ಯಾಸ ನೀಡಿ ಗೌರವಿಸಿದರು.


ಈ ಸಂದರ್ಭದಲ್ಲಿ ನೆಕ್ಲಾಜೆ ಶ್ರೀಕಾಳಿಕಾಂಬಾ ದೇವಸ್ಥಾನದ ಮ್ಯಾನೇಜರ್ ದಿನೇಶ್ ಆಚಾರ್ಯ, ಅಂಗ ಸಂಸ್ಥೆ ಭಜನಾ ಸೇವಾ ಸಮಿತಿಯ ಅಧ್ಯಕ್ಷ ದಿನೇಶ್ ಆಚಾರ್ಯ ಅತ್ತೂರು, ಪೇಟೆ ಮೊಕ್ತೇಸರರು ನಿತ್ಯಾನಂದ ಆಚಾರ್ಯ, ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಎಂ. ರಮೇಶ್ ಆಚಾರ್ಯ, ಮಹಿಳಾ ಮಂಡಳಿಯ ಕೋಶಾಧಿಕಾರಿ ಜ್ಯೋತಿ ರಮೇಶ್ ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು.







































