ಶ್ರೀ ಶಂಕರ ಪ್ರತಿಷ್ಠಾನದ ಅಧ್ಯಕ್ಷರಾಗಿ ಪದ್ಮನಾಭ ಭಂಡಿ – ಪ್ರ. ಕಾರ್ಯದರ್ಶಿಯಾಗಿ ಸತೀಶ್ ರಾವ್

ಕಾರ್ಕಳ : ಶ್ರೀ ಶಂಕರ ಪ್ರತಿಷ್ಠಾನ ಕಾರ್ಕಳ ಇದರ ನೂತನ ಅಧ್ಯಕ್ಷರಾಗಿ ನಿವೃತ್ತ ಎಲ್‌ಐಸಿ ಅಧಿಕಾರಿ, ಬಂಗ್ಲೆಗುಡ್ಡೆ ನಿವಾಸಿ ಪದ್ಮನಾಭ ಭಂಡಿ ಪೆರ್ಡೂರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ರಾವ್ ಕರ್ವಾಲು ಆಯ್ಕೆಯಾಗಿದ್ದಾರೆ.
ಆ. 17ರಂದು ಶ್ರೀ ರಾಧಾಕೃಷ್ಣ ಸಭಾಭವನದಲ್ಲಿ ನಡೆದ ಪ್ರತಿಷ್ಠಾನದ 41ನೇ ವಾರ್ಷಿಕೋತ್ಸವ ಹಾಗೂ ಮಹಾಸಭೆಯಲ್ಲಿ ಮುಂದಿನ 2 ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಿ. ರಮೇಶ್ ರಾವ್ ಕಾಬೆಟ್ಟು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಉಪಾಧ್ಯಕ್ಷರಾಗಿ ವತ್ಸಲಾ ಶಾನ್‌ಭಾಗ್, ಜೊತೆ ಕಾರ್ಯದರ್ಶಿಯಾಗಿ ಸುಬ್ರಮಣ್ಯ ಶರ್ಮ ಕುಕ್ಕುಡೆ, ಕೋಶಾಧಿಕಾರಿಯಾಗಿ ಕೋದಂಡರಾಮ್ ರಾವ್, ಜೊತೆ ಕೋಶಾಧಿಕಾರಿಯಾಗಿ ವಿಜಯ ಕುಮಾರ್ ರಾವ್ ಪರಪ್ಪು, ಕಟ್ಟಡ ಸಮಿತಿ ಅಧ್ಯಕ್ಷರಾಗಿ ಸಾವಿತ್ರಿ ಮನೋಹರ್ ರಾವ್, ಕಾರ್ಯದರ್ಶಿಯಾಗಿ ವಿಘ್ನೇಶ್ ಕುಮಾರ್, ಮಹಿಳಾ ವಿಭಾಗದ ಅಧ್ಯಕ್ಷರಾಗಿ ಪ್ರೇಮಾ ರಾವ್ ತೆಳ್ಳಾರು, ಕಾರ್ಯದರ್ಶಿಯಾಗಿ ಶೈಲಜಾ ರತ್ನಾಕರ್ ರಾವ್, ಸಾಂಸ್ಕೃತಿಕ /ಭಜನೆ ಕಾರ್ಯದರ್ಶಿಯಾಗಿ ಸೌಮ್ಯ ಭವಾನಿ ಶಂಕರ ರಾವ್, ಜೊತೆ ಕಾರ್ಯದರ್ಶಿಯಾಗಿ ಶ್ರೀಲತಾ ಶರ್ಮ ನಿಟ್ಟೆ, ಪುರುಷ ಕ್ರೀಡಾ ಕಾರ್ಯದರ್ಶಿಯಾಗಿ ದಿನೇಶ್ ರಾವ್, ಮಹಿಳಾ ಕ್ರೀಡಾ ಕಾರ್ಯದರ್ಶಿಯಾಗಿ ಮಲ್ಲಿಕಾ ಹೆಬ್ಬಾರ್, ಲೆಕ್ಕ ಪರಿಶೋಧಕರಾಗಿ ಸಿಎ ರಮೇಶ್ ರಾವ್ ಕರ್ವಾಲು ಅವರನ್ನು ಆಯ್ಕೆಮಾಡಲಾಗಿದೆ.















































































error: Content is protected !!
Scroll to Top