ಕಾರ್ಕಳ : ಅರ್ಬಿ ದುರ್ಗಾ ಗ್ರಾಮದ ಶ್ರೀ ಬ್ರಹ್ಮಶ್ರೀ ಮುಗೇರ ದೈವಸ್ಥಾನದ ಜೀರ್ಣೋದ್ಧಾರದ ಕುರಿತಂತೆ ಆ. 22ರಂದು ಬೆಳಿಗ್ಗೆ 9 ಗಂಟೆಗೆ ವಿದ್ವಾನ್ ಕೇಂಜ ಶ್ರೀಧರ ತಂತ್ರಿಯವರ ಮುಂದಾಳತ್ವದಲ್ಲಿ ಕೇರಳ ಪಯ್ಯನೂರು ರೂಪೇಶ್ ಪುದುವಾಳ್ ಅವರಿಂದ ಆರೂಢ ಪ್ರಶ್ನಾ ಚಿಂತನೆಯು ನಡೆಯಲಿರುವುದು. ಈ ಸತ್ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಮತ್ತು ಭಕ್ತಾಭಿಮಾನಿಗಳು ಭಾಗವಹಿಸಬೇಕಾಗಿ ಆಡಳಿತ ಮೊಕ್ತೇಸರರು ಅರ್ಬಿ ಸುಬ್ರಾಯ ಪಾಟಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆ. 22 : ದುರ್ಗಾ ಬ್ರಹ್ಮಶ್ರೀ ಮುಗೇರ ದೈವಸ್ಥಾನದಲ್ಲಿ ಆರೂಢ ಪ್ರಶ್ನಾಚಿಂತನೆ





















