ಕಾರ್ಕಳ : ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಗಾಳಿ ಮಳೆಗೆ ಕಾರ್ಕಳ – ಹೆಬ್ರಿ ತಾಲೂಕಿನ ವಿವಿಧೆಡೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಆ. 19 ಮುಂಜಾನೆ ಸುರಿದ ಗಾಳಿ ಮಳೆಗೆ ಬೈಲೂರು ಗ್ರಾಮದ ಮೊಹಮ್ಮದ್ ಅವರ ಮನೆಗೆ ಮರ ಬಿದ್ದು ಶೀಟ್ ಹಾಗೂ ಹೆಂಚುಗಳಿಗೆ ಹಾನಿಯಾಗಿ 30,000 ರೂ. ನಷ್ಟ, ಪದ್ದು ಮೂಲ್ಯ ಅವರ ಮನೆಗೆ ಮರ ಬಿದ್ದು ಶೀಟ್ ಹಾಗೂ ಹೆಂಚುಗಳಿಗೆ ಹಾನಿಯಾಗಿ 10,000 ರೂ. ನಷ್ಟ ಹಾಗೂ ದಿನಕರ ಶೆಟ್ಟಿಗಾರ್ ಅವರ ಮನೆಗೆ ಹಾನಿಯಾಗಿ 4,000 ರೂ. ನಷ್ಟ ಉಂಟಾಗಿದೆ.
ಕಡ್ತಲ ಗ್ರಾಮದ ಅಶೋಕ ನಗರದ ಲಲಿತ ಅವರ ಮನೆಯ ಮೇಲ್ಛಾವಣಿ ಮತ್ತು ಗೋಡೆ ಕುಸಿದು 50,000 ರೂ. ನಷ್ಟ ಉಂಟಾಗಿದೆ. ಕುಕ್ಕುಂದೂರು ಗ್ರಾಮದ ಬಂಗ್ಲೆಗುಡ್ಡೆಯ ಶ್ಯಾಮಲ ಎಂಬವರ ಮನೆಯ ಪಕ್ಕದ ಗ್ಯಾರೇಜ್ ಕಟ್ಟಡದ ಮೇಲ್ಛಾವಣಿ ಬಿದ್ದು 25,000 ರೂ. ನಷ್ಟ ಉಂಟಾಗಿದೆ. ನಂದಳಿಕೆ ಗ್ರಾಮದ ಜಂತ್ರ ಅಗೋಳಿಬೈಲು ಎಂಬಲ್ಲಿ ಸೆವರಿನ್ ನಜರತ್, ಸಿಲೆಸ್ಟಾರ್ ನಜರತ್ ಹಾಗೂ ಡೆನ್ನಿಸ್ ಮೆಂಡೋನ್ಸ್ ಅವರ ಮನೆ ಗಾಳಿಗೆ ಹಾನಿಯಾಗಿ ತಲಾ 30 ಸಾ. ರೂ. ನಷ್ಟ ಸಂಭವಿಸಿದೆ.

ಬೆಳ್ಮಣ್ ಗ್ರಾಮದಲ್ಲಿ 25 ಮನೆಗೆ ಹಾನಿ
ಬೆಳ್ಮಣ್ ಗ್ರಾಮದಲ್ಲಿ ಶಿವಕುಮಾರ್ ಎಂಬವರ ಮನೆಗೆ ಹಾನಿಯಾಗಿ 5 ಸಾ.ರೂ. ನಷ್ಟ, ವಿನೋದ ಮೂಲ್ಯ ಅವರ ಮೆನಯ ಹೆಂಚು, ಸಿಮೇಂಟ್ ಶೀಟು ಗಾಳಿಗೆ ಹಾನಿಯಾಗಿ 10 ಸಾ. ರೂ. ನಷ್ಟ, ಬಸವಣ್ಣ ಹಿರೇಮಠ ಅವರ ಮನೆಯ ಸಿಮೇಂಟ್ ಶೀಟು ಗಾಳಿ ಮಳೆಗೆ ಹಾನಿಯಾಗಿದೆ. ರಾಜು ಮೂಲ್ಯ ಅವರ ಮನೆಗೆ ಹಾನಿಯಾಗಿ 15 ಸಾ.ರೂ. ನಷ್ಟ, ಸುಶೀಲ ದೇವಾಡಿಗ ಮನೆಗೆ ಹಾನಿಯಾಗಿ 3 ಸಾ.ರೂ. ನಷ್ಟ, ರೋಹಿಣಿ ಸಮಗಾರ ಅವರ ಮನೆಗೆ ಹಾನಿಯಾಗಿ 5 ಸಾ.ರೂ. ನಷ್ಟ, ರಾಧು ಮೂಲ್ಯ ಅವರ ಮನೆಗೆ ಹಾನಿಯಾಗಿ 5 ಸಾ. ರೂ. ನಷ್ಟ, ಸುನೀತಾ ಅವರ ಮನೆಗೆ ಹಾನಿಯಾಗಿ 8 ಸಾ. ರೂ. ನಷ್ಟ, ವಾರಿಜ ಮೂಲ್ಯ ಅವರ ಮನೆಗೆ ಹಾನಿಯಾಗಿ 10 ಸಾ. ರೂ. ನಷ್ಟ, ಸುಜಾತ ಅವರ ಮನೆಗೆ ಗಾಳಿ ಮಳೆಗೆ ಹಾನಿಯಾಗಿದೆ. ಜಯ ಮೂಲ್ಯ ಅವರ ಮನೆಗೆ ಹಾನಿಯಾಗಿ 10 ಸಾ. ರೂ. ನಷ್ಟ, ಸಂಜೀವ ಮೂಲ್ಯ ಅವರ ಮನೆಗೆ ಹಾನಿಯಾಗಿ 15 ಸಾ. ರೂ. ನಷ್ಟ, ಆರ್. ಎಂ. ನಾಗರಾಜ್ ಅವರ ಮನೆಯ ಹೆಂಚು, ಸಿಮೇಂಟ್ ಶೀಟ್ ಹಾನಿಯಾಗಿ 20 ಸಾ. ರೂ. ನಷ್ಟ, ಕಿಶೋರ್ ಆಚಾರ್ಯ ಅವರ ಮನೆಗೆ ಹಾನಿಯಾಗಿ 12 ಸಾ. ರೂ. ನಷ್ಟ, ಶಕುಂತಳ ಆಚಾರ್ಯ ಅವರ ಮನೆ ಹಾನಿಗೊಳಗಾಗಿ 12 ಸಾ.ರೂ. ನಷ್ಟ, ಲೀನಾ ಪೇರ್ನಾಂಡೀಸ್ ಅವನ ಮನೆಗೆ ಹಾನಿಯಾಗಿ 12 ಸಾ. ರೂ. ನಷ್ಟ ಉಂಟಾಗಿದೆ. ಲಕ್ಷ್ಮೀ ಎಂ. ಅವರ ಮನೆಯ ಮೇಲ್ಛಾವಣಿ ಶೀಟ್ ಗಾಳಿಗೆ ಹಾನಿಯಾಗಿದೆ. ದಿನೇಶ್ ಶೆಟ್ಟಿ ಅವರ ಕೋಳಿ ಫಾರಂಗೆ ಬೋಗಿ ಮರ ಬಿದ್ದು ಸಂಪೂರ್ಣ ಹಾನಿಯಾಗಿ 1 ಲಕ್ಷ 50 ಸಾ. ರೂ. ನಷ್ಟ ಸಂಭವಿಸಿದೆ. ವಿಠಲ ಆಚಾರ್ಯ ಅವರ ಮನೆಗೆ ಹಾನಿಯಾಗಿ 15 ಸಾ. ರೂ. ನಷ್ಟ, ರತ್ನ ಆಚಾರ್ಯ ಅವರ ಮನೆಗೆ ಹಾನಿಯಾಗಿ 8 ಸಾ. ರೂ. ನಷ್ಟ, ಸುಂದರಿ ಅವರ ಮನೆಗೆ ಮಳೆಯಿಂದಾಗಿ ಹಾನಿಯಾಗಿದೆ. ಅಚ್ಚುತ ಅವರ ಮನೆಗೆ ಹಾನಿಯಾಗಿ 20 ಸಾ. ರೂ. ಸಂಭವಿಸಿದೆ. ಸುಮತಿ ಆಚಾರ್ಯ ಮನೆಗೆ ಹಾನಿಯಾಗಿ 20 ಸಾ. ರೂ. ನಷ್ಟ ಹಾಗೂ ಕಲ್ಯಾಣಿ ಹಾಗೂ ಲಾರೆನ್ಸ್ ಡಿಸೋಜ ಅವರ ಮನೆಗೂ ಮಳೆಯಿಂದಾಗಿ ಹಾನಿಯಾಗಿ ನಷ್ಟ ಉಂಟಾಗಿದೆ.
ರೆಂಜಾಳ ಗ್ರಾಮದ ಪೇರಲ್ದಬೆಟ್ಟು ಅಶೋಕ್ ಕುಮಾರ್ ಜೈನ್, ದಿವಾಕರ್ ಶೆಟ್ಟಿ, ಅರುಣಾ ಬಿ. ಶೆಟ್ಟಿ, ಸಂಪತ್ ಜೈನ್, ಭಾರತಿ ಆಳ್ವ, ರತ್ನಾ ಶೆಟ್ಟಿ ಮತ್ತು ಚಂದ್ರಹಾಸ ಶೆಟ್ಟಿಯವರ ಮನೆ ಮತ್ತು ಕೃಷಿಗೆ ಹಾನಿಯಾಗಿದೆ ಎಂದು ರೆಂಜಾಳ ಗ್ರಾ. ಪಂ. ಅಧ್ಯಕ್ಷ ರಮೇಶ್ ಯು. ಶೆಟ್ಟಿ ತಿಳಿಸಿದ್ದಾರೆ.
ಎರ್ಲಪಾಡಿ ಗ್ರಾಮದ ಮಮತಾ ಶೆಟ್ಟಿ ಅವರ ಮನೆಗೆ ಮಳೆಯಿಂದ ಹಾನಿಯಾಗಿ 50,000 ರೂ. ನಷ್ಟ ಹಾಗು ಜಲಜ ಶೆಟ್ಟಿ ಅವರ ಮನೆಗೆ ಗಾಳಿಯಿಂದ ಹಾನಿಯಾಗಿ 30,000 ರೂ. ನಷ್ಟ ಉಂಟಾಗಿದೆ.
ಚಾರ – ಧರೆಗುರುಳಿದ ವಿದ್ಯುತ್ ಕಂಬಗಳು
ಹೆಬ್ರಿ ತಾಲೂಕಿನ ಚಾರ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಗಾಳಿ ಮಳೆಗೆ ಸುಮಾರು 10 ಮನೆ ಹಾನಿಗೊಳಗಾಗಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಅಡಿಕೆ, ತೆಂಗು ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿದೆ. ಮರ ಬಿದ್ದು ಸುಮಾರು 40 ವಿದ್ಯುತ್ ಕಂಬಗಳು ಧರೆಗುರುಳಿದೆ. ಸ್ಥಳಕ್ಕೆ ಹೆಬ್ರಿ ತಹಶೀಲ್ದಾರ್, ಎಸ್ಐ, ಅಸಿಸ್ಟೆಂಟ್ ಕಮಿಷನರ್, ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಓ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರು ಭೇಟಿ ನೀಡಿದ್ದಾರೆ.
ಮಳೆ ಪ್ರಮಾಣ
ಕಾರ್ಕಳ 49.2 ಮಿ. ಮೀ., ಇರ್ವತ್ತೂರು 13.8 ಮಿ.ಮೀ., ಅಜೆಕಾರು 105.8 ಮಿ.ಮೀ., ಸಾಣೂರು 51.6 ಮಿ. ಮೀ., ಕೆದಿಂಜೆ 39.8 ಮಿ. ಮೀ., ಮುಳಿಕಾರು 54.0 ಮಿ. ಮೀ. ಹಾಗೂ ಕೆರ್ವಾಶೆಯಲ್ಲಿ 67.2 ಮಿ. ಮೀ. ಮಳೆಯಾಗಿದ್ದು, 58.77 ಮಿ.ಮೀ ಸರಾಸರಿ ಮಳೆ ದಾಖಲಾಗಿದೆ.









































