ರಕ್ತದಾನ ಶಿಬಿರ – ಸಾಮಾಜಿಕ ನೆರವು
ಕಾರ್ಕಳ : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ದಿ. ಗೋಪ ಶೆಟ್ಟಿಯವರ 104ನೇ ಜನ್ಮದಿನದ ಅಂಗವಾಗಿ ಆ. 21ರಂದು ಸಾಮಾಜಿಕ ನೆರವು ಕಾರ್ಯಕ್ರಮ ಮತ್ತು ಕೆ.ಎಂ.ಸಿ. ಬ್ಲಡ್ ಸೆಂಟರ್ನ ನೆರವಿನೊಂದಿಗೆ ರಕ್ತದಾನ ಶಿಬಿರ ನಡೆಯಲಿದೆ.
ಸನ್ಮಾನ
ಕಾರ್ಯಕ್ರಮದಲ್ಲಿ ಸಮಾಜ ಸೇವಕ ವಿಶು ಶೆಟ್ಟಿ, ಸ್ವಚ್ಛ ಕಾರ್ಕಳ ಬ್ರಿಗೇಡ್ನ ಫೆಲಿಕ್ಸ್ ವಾಝ್ ಹಾಗೂ ಕುಕ್ಕುಂದೂರು, ಬೈಲೂರು, ಹಿರ್ಗಾನ ಹಾಗೂ ಅಜೆಕಾರ್ ಗ್ರಾಮಗಳ ಸ್ವಚ್ಛತಾ ಕಾರ್ಮಿಕರನ್ನು ಸನ್ಮಾನಿಸಲಾಗುವುದು.;

ರಕ್ತದಾನ ಶಿಬಿರವನ್ನು ಕಸ್ತೂರ್ಬಾ ಹಾಸ್ಪಿಟಲ್ ರಕ್ತನಿಧಿ ಹಾಗೂ ಎಚ್.ಬಿ.ಟಿ ವಿಭಾಗದ ಮುಖ್ಯಸ್ಥ ಪ್ರೊ. ಡಾ. ಗಣೇಶ್ ಮೋಹನ್ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ರೋಟರಿ ಆಸ್ಪತ್ರೆಯ ಪ್ರಸೂತಿ ಹಾಗೂ ಸ್ತ್ರೀ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಂಜಯ್ ವಹಿಸಲಿದ್ದಾರೆ. ಕುಕ್ಕುಂದೂರು ಗ್ರಾ. ಪಂ. ಸದಸ್ಯ ರಹಮತ್ತುಲ್ಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.









































