ಅಮೃತ ಭಾರತಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬೃಹತ್ ಶೋಭಾಯಾತ್ರೆ

ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಬೃಹತ್ ಶೋಭಾಯಾತ್ರೆ ಜರುಗಿತು. ಸುಮಾರು 3000 ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಶ್ರೀ ಅನಂತಪದ್ಮನಾಭ ದೇವಸ್ಥಾನ ಕೆಳಪೇಟೆ ಹೆಬ್ರಿ, ಶ್ರೀ ಗಜಾನನ ಕ್ಯಾಶ್ಯು ಇಂಡಸ್ಟ್ರೀಸ್ ಕುಚ್ಚೂರು ರಸ್ತೆ ಮತ್ತು ಬಂಟರ ಭವನ ಆಗುಂಬೆ ರಸ್ತೆಯಿಂದ ಏಕಕಾಲದಲ್ಲಿ ಶೋಭಾಯಾತ್ರೆ ಹೊರಟಿತು. ಹೆಬ್ರಿ ಪಟ್ಟಣವಾಗಿ ಅಮೃತ ಭಾರತಿ ಮೈದಾನಕ್ಕೆ ಸಾಗಿ ಬಂದ ಮೆರವಣಿಗೆಯಲ್ಲಿ ಕೋಲಾಟ, ಯಕ್ಷಗಾನ, ಮರದ ಕಾಲಿನ ಕುಣಿತ, ಕುಣಿತ ಭಜನೆ, ಹುಲಿ ಕುಣಿತ, ಮೊಸರು ಕುಡಿಕೆ, ಪ್ರಮುಖ ಆಕರ್ಷಣೆಯಾಗಿತ್ತು.

ಅಮೃತ ಭಾರತಿ ಟ್ರಸ್ಟ್ ಅಧ್ಯಕ್ಷ ಸಿಎ ಎಂ. ರವಿ ರಾವ್, ಕಾರ್ಯದರ್ಶಿ ಗುರುದಾಸ್ ಶೆಣೈ, ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಪೈ, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ನಾಯಕ್, ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ, ಟ್ರಸ್ಟಿಗಳಾದ ಭಾಸ್ಕರ್ ಜೋಯಿಸ್, ಯೋಗೇಶ್ ಭಟ್, ಸುಧೀರ್ ನಾಯಕ್, ಬಾಲಕೃಷ್ಣ ಮಲ್ಯ, ವಿಷ್ಣುಮೂರ್ತಿ ನಾಯಕ್, ಲಕ್ಷ್ಮಣ್ ಭಟ್, ಹಾಸ್ಟೆಲ್ ಕಮಿಟಿ ಸದಸ್ಯರು ರಾಮಕೃಷ್ಣ ಆಚಾರ್ಯ, ಕಾಲೇಜು ಪ್ರಾಂಶುಪಾಲ ಪ್ರಕಾಶ್ ಜೋಗಿ, ಸಿಬಿಎಸ್ಇ ವಿಭಾಗದ ಪ್ರಾಂಶುಪಾಲ ಅರುಣ್ ಹೆಚ್. ವೈ., ಮುಖ್ಯ ಶಿಕ್ಷಕಿಯರಾದ ಅನಿತಾ, ಅಪರ್ಣಾ ಆಚಾರ್, ಶಕುಂತಲಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ ಕುಮಾರ್ ಶೆಟ್ಟಿ, ಕ್ಯಾಂಪಸ್ ಮೇಲ್ವಿಚಾರಕ ರಾಘವೇಂದ್ರ, ಅಕೌಂಟ್ಸ್ ವಿಭಾಗದ ಮಹೇಶ್, ಶಾಲಾ ಶಿಕ್ಷಕರು, ಉಪನ್ಯಾಸಕರು, ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು, ಪೋಷಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.









































































































error: Content is protected !!
Scroll to Top