ಉನ್ನತಿ ತಂಡದ 4ನೇ ವರ್ಷದ ಸಂಭ್ರಮಾಚರಣೆ – ಸಾಧಕರಿಗೆ ಸನ್ಮಾನ – 1 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ

ಕಾರ್ಕಳ : ಉನ್ನತಿ ಚಾರಿಟೇಬಲ್ ಟ್ರಸ್ಟ್‌ನ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ತಂಡದ 4ನೇ ವರ್ಷದ ಸಂಭ್ರಮಾಚರಣೆ ಬಜಗೋಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆರವೇರಿತು.

ಸನ್ಮಾನ
ಕಾರ್ಯಕ್ರಮದಲ್ಲಿ ಸಾಧಕರಾದ ಅಯ್ಯೋ ಶ್ರದ್ಧಾ ಖ್ಯಾತಿಯ ಮೋಸ್ಟ್ ಕ್ರಿಯೇಟಿವ್ ಕಂಟೆಂಟ್ ಕ್ರಿಯೇಟರ್-ಫೀಮೇಲ್ ಅವಾರ್ಡ್ ವಿನ್ನರ್ ಶ್ರದ್ಧಾ ಜೈನ್, ಭಾರತೀಯ ಸೇನೆಯ ನಿವೃತ್ತ ಸಿಆರ್‌ಪಿಎಫ್‌ ಯೋಧ ಚಾಕೊ ಕೆ.ಜೆ, ಯೋಧ ತಮ್ಮಯ್ಯ ಶೆಟ್ಟಿ, ನಿವೃತ್ತ ಶಿಕ್ಷಕ ವಿಜಯ ಕುಮಾರ್ ಬಜಗೋಳಿ ಹಾಗೂ ರಾಷ್ಟ್ರ ಮಟ್ಟದ ಶಾಟ್ ಪುಟ್ ಕ್ರೀಡಾಪಟು ವಿಸ್ಮಿತಾ ಬಜಗೋಳಿ ಅವರನ್ನು ಸನ್ಮಾನಿಸಲಾಯಿತು.

ಶ್ರದ್ಧಾ ಜೈನ್ ಮಾತನಾಡಿ, ಸರಕಾರಿ ಶಾಲೆಗಳು ಮೌಲ್ಯಯುತ ಶಿಕ್ಷಣದ ಜೊತೆಗೆ ಜೀವನ ಪಾಠವನ್ನು ಕಲಿಸುತ್ತದೆ. ಹೀಗಾಗಿ ಸರಕಾರಿ ಶಾಲಾ ಮಕ್ಕಳು ಜೀವನದ ಕಠಿಣ ಸವಾಲುಗಳನ್ನು ಎದುರಿಸುವಷ್ಟು ಸಮರ್ಥರಾಗಿರುತ್ತಾರೆ ಎಂದ ಅವರು ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಿಕ್ಷಣ ಸಂಸ್ಥೆಗಳಿಗೆ ನೆರವಾಗುವ ಮೂಲಕ ಶಾಲೆಯ ಸರ್ವತೋಮುಖ ಪ್ರಗತಿಗೆ ಸಹಕರಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿ ವೇತನ
ಉನ್ನತಿ ತಂಡದ ಸದಸ್ಯ ಮುಟ್ಲುಪಾಡಿ ಪ್ರೀತಮ್ ಶೆಟ್ಟಿ ಸ್ಮರಣಾರ್ಥ ಕ್ರೀಡಾ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ತಾಲೂಕಿನ 44 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಜೊತೆಗೆ ತಾಲೂಕಿನ ಪ್ರತಿಭಾನ್ವಿತ 22 ವಿದ್ಯಾರ್ಥಿಗಳಿಗೆ 1,08,000 ರೂ. ಪ್ರೋತ್ಸಾಹ ಧನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಡಾರು ಗ್ರಾ. ಪಂ. ಅಧ್ಯಕ್ಷೆ ಶ್ರುತಿ ಡಿ. ಅತಿಕಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿಎ ನಿತೇಶ್‌ ಶೆಟ್ಟಿ ಮುಟ್ಲುಪಾಡಿ, ಉದ್ಯಮಿ ಚಿರಾಗ್‌ ಯು. ರಾವ್‌, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದೀಪಕ್‌ ಅತಿಕಾರಿ, ಮುಖ್ಯ ಶಿಕ್ಷಕಿ ಶೋಭಾ ಎಸ್‌. ಶೆಟ್ಟಿ, ಉದ್ಯಮಿ ರಾಕೇಶ್‌ ಶೆಟ್ಟಿ ಕುಕ್ಕುಂದೂರು, ಪಂಚಾಯತ್‌ ಸದಸ್ಯ ರಜತ್‌ ರಾಮ್‌ಮೋಹನ್‌ ಹಾಗೂ ಉನ್ನತಿ ತಂಡದ ಸದಸ್ಯರು ಸೇರಿದಂತೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರರಿದ್ದರು. ತಂಡದ ಸದಸ್ಯರಾದ ಕೌಶಿಕ್‌ ಮುನಿಯಾಲು ಸ್ವಾಗತಿಸಿ, ಲಾವಣ್ಯ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕಾವ್ಯ ಶೆಟ್ಟಿ ವಂದಿಸಿದರು.









































































































error: Content is protected !!
Scroll to Top