ಕಾರ್ಕಳ : ಕ್ಷತ್ರಿಯ ಮರಾಠ/ಆರ್ಯ ಮರಾಠ ಸಮಾಜ ಕಾರ್ಕಳ, ಕಾಸರಗೋಡು, ಮಂಗಳೂರು, ಸುಳ್ಯ, ಮುಲ್ಕಿ, ಮೂಡಬಿದ್ರಿ, ಉಡುಪಿ, ಸಿದ್ದಾಪುರ, ತೀರ್ಥಹಳ್ಳಿ, ಕೊಪ್ಪ, ಬಂಧುಗಳಿಂದ ಗುರುವಂದನೆಯು ಶೃಂಗೇರಿ ಶ್ರೀ ಶಾರದಾಂಬೆಯ ಮತ್ತು ಮಠದ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮವು ಜರುಗಿತು. ಐದು ಜಿಲ್ಲೆಗಳ ಸಮಾಜ ಬಂಧುಗಳು ಒಂದೆಡೆ ಸೇರಿ ಮಠಾಧೀಶರ ದರ್ಶನ ಪಡೆದರು. ಬಳಿಕ ಶ್ರೀಗಳು, ಕ್ಷತ್ರಿಯ ಸಮಾಜದ ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ, ಸಮಾಜಮುಖಿ ಕೆಲಸ ಕಾರ್ಯಗಳು ಸಮಾಜದಿಂದ ನಿತ್ಯ ನಿರಂತರ ಮಾಡುವಂತೆ ಆಗಬೇಕೆಂದು ಕಿವಿ ಮಾತನ್ನು ಹೇಳಿ ಆಶೀರ್ವಚನವನ್ನು ನೀಡಿ ಮಂತ್ರಾಕ್ಷತೆ ನೀಡಿದರು
ಕ್ಷತ್ರಿಯ ಮರಾಠ/ಆರ್ಯ ಮರಾಠ ಸಮಾಜ ಬಾಂಧವರಿಂದ ಶೃಂಗೇರಿಯಲ್ಲಿ ಗುರುವಂದನಾ ಕಾರ್ಯಕ್ರಮ






























































