ಹಾಸ್ಟೆಲ್ ಗೋಡೆಯ ಮೇಲೆ ಕೋಮು ದ್ವೇಷ ಬರವಣಿಗೆ ಪ್ರಕರಣದ ಆರೋಪಿಯನ್ನು ಬಂಧಿಸಿರುವ ಪೊಲೀಸರಿಗೆ ಅಭಿನಂದನೆಗಳು – ಮನೀಷ್‌ ನಿಟ್ಟೆ

ಕಾರ್ಕಳ : ಎರಡು ತಿಂಗಳ ಹಿಂದೆ ನಡೆದ ನಿಟ್ಟೆ ಹಾಸ್ಟೆಲ್ ಕೋಮು ದ್ವೇಷ ಹಾಗೂ ದೇಶದ್ರೋಹದ ಗೋಡಬರಹ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿದ ಪೋಲಿಸ್ ಇಲಾಖೆಗೆ ಅಭಿನಂದನೆಗಳು. ಸೂಕ್ತ ರೀತಿಯ ತನಿಖೆಯ ಮೂಲಕ ನ್ಯಾಯ ಮರೀಚಿಕೆ ಆಗದಂತೆ ನೈಜ ಆರೋಪಿಯನ್ನು ಬಂಧಿಸಿದ ಪೋಲಿಸರ ಕಾರ್ಯ ಸಾರ್ವಜನಿಕ ವಲಯದಲ್ಲಿ ಇಲಾಖೆಯ ಮೇಲಿನ ನಂಬಿಕೆ ಹಾಗೂ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಕಾರ್ಕಳ ಬಜರಂಗದಳ ಸಂಯೋಜಕ ಮನೀಷ್‌ ನಿಟ್ಟೆ ಹೇಳಿದ್ದಾರೆ.

ಅಕ್ರಮ ಕಸಾಯಿಖಾನೆ ವಿರುದ್ಧ ಕ್ರಮಕೈಗೊಳ್ಳಿ
ತೆಳ್ಳಾರಿನಲ್ಲಿ ಗೋವಿನ ರುಂಡ ಪತ್ತೆಯಾಗಿರುವ ಪ್ರಕರಣದಲ್ಲಿ ಯಾರೇ ಆರೋಪಿಗಳಿದ್ದರು, ಯಾವುದೇ ಧರ್ಮದವರಾಗಿದ್ದರು ಕೂಡ ಅವರನ್ನು ಗೋ ಹತ್ಯೆ ನಿಷೇಧ ಕಾನೂನಿನ ಅಡಿಯಲ್ಲಿ ಬಂಧಿಸಬೇಕು ಮತ್ತು ತಾಲೂಕಿನಾದ್ಯಂತ ಕಾರ್ಯಾಚರಿಸುತ್ತಿರುವ ಅಕ್ರಮ ಕಸಾಯಿಖಾನೆಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಬಜರಂಗದಳ ಆಗ್ರಹಿಸುತ್ತದೆ. ಕಾರ್ಕಳ ತಾಲೂಕಿನಲ್ಲಿ ಗೋವುಗಳ ಅಕ್ರಮ ಸಾಗಾಟ ಇತ್ತೀಚಿನ ದಿನಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದು, ಪೋಲಿಸ್ ಇಲಾಖೆ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಮತ್ತು ಗೋ ರಕ್ಷಣೆಯ ವಿಚಾರದಲ್ಲಿ ಇಲಾಖೆಯೊಂದಿಗೆ ಸಂಪೂರ್ಣ ಸಹಕಾರ ನೀಡಲು ಬಜರಂಗದಳ ಸಿದ್ಧವಿದೆ ಎಂದು ಮನೀಷ್‌ ನಿಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.































































































error: Content is protected !!
Scroll to Top