ಹೆಬ್ರಿ : ಲೋಕಲ್ ಜಾಬ್ ಆಪ್‌ನಲ್ಲಿ ಬಂದ ವರ್ಕ್ ಫ್ರಂ ಹೋಮ್ ಎನ್ನುವ ಜಾಹೀರಾತನ್ನು ನಂಬಿ ವ್ಯಕ್ತಿಯೋರ್ವರು 2,02,046 ರೂ. ಹಣವನ್ನು ಕಳೆದುಕೊಂಡ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿಯ ರಮೇಶ್ ಎಂಬವರು 2024ರ ಡಿಸೆಂಬರ್‌ನಲ್ಲಿ ಮೊಬೈಲ್‌ನಲ್ಲಿ ಲೋಕಲ್ ಜಾಬ್ ಆಪ್‌ನಲ್ಲಿ ಸನ್ ಸೈನ್ ಹೆಚ್‌ಆರ್ ಸಲ್ಯುಸನ್ ಬೆಂಗಳೂರು ಎಂಬ ಹೆಸರಿನ ಕಂಪೆನಿಯಿಂದ ಡಾಟಾ ಎಂಟ್ರಿ ಬಗ್ಗೆ ಪ್ರಕಟಿಸಿದ್ದ ವರ್ಕ್ ಫ್ರಂ ಹೋಮ್ ಎಂಬ ಜಾಹಿರಾತಿಗೆ ಅರ್ಜಿ ಸಲ್ಲಿಸಿ ಕಂಪೆನಿಯವರು ಕಳುಹಿಸಿದ ಸ್ಕಾನರ್‌ಗೆ 2024 ಡಿ. 19ರಂದು 500 ರೂ. ಹಾಕಿ ನೋಂದಣಿ ಮಾಡಿಕೊಂಡಿದ್ದರು. ನಂತರ ಸೆಕ್ಯೂರಿಟಿ ಡೆಪಾಸಿಟ್ ಎಂದು 2,050 ರೂ. ಹಣವನ್ನು, ಬಳಿಕ ರಂಜಿತ್ ಎಂಬ ಹೆಸರಿನಿಂದ ರಮೇಶ್ ಅವರಿಗೆ ಮೆಸೇಜ್ ಮಾಡಿ ಅಮೆಜಾನ್‌ಗೆ ಸಂಬಂಧಿಸಿದ ಡಾಟಾ ಎಂಟ್ರಿ ಮಾಡುವ ಡಾಟಾ ಕಳುಹಿಸಿದ್ದು ಅದಕ್ಕಾಗಿ 2,500 ರೂ. ಹಣ ಹಾಕಿಸಿಕೊಂಡಿದ್ದಾರೆ. ಆ ಬಳಿಕ ಸಾಲರಿ ಅಕೌಂಟ್ ಕ್ರಿಯೇಷನ್, ಎರರ್ ಮೊಡಿಪೈ, ಎರ್ ಕಾನ್ಸಲೇಷನ್, ಅಕೌಂಟ್ ಸಮಸ್ಯೆ ಇರುವುದಾಗಿ, ಡಿಡಿ ಮಾಡುವುದಾಗಿ ಹಾಗೂ ಬೇರೆ ಬೇರೆ ಚಾರ್ಜಸ್ ಎಂದು ಹೇಳುತ್ತಾ ಐಶ್ವರ್ಯ ಅಕೌಂಟೆಂಟ್ ಎಂದು ಹೇಳಿ ಹಾಗೂ ಶ್ರೀಧರ ಎಂ.ಡಿ. ಎಂದು ನಂಬಿಸಿ ಹಂತ ಹಂತವಾಗಿ 2024ರ ಡಿ.19ರಿಂದ 2025 ಜು. 20ರವರೆಗೆ 98 ಟ್ರಾಜೆಂಕ್ಷನ್ ಮೂಲಕ ರಮೇಶ್ ಅವರಿಂದ ಒಟ್ಟು 2,02,046 ರೂ. ಹಣವನ್ನು ಸ್ಕಾನರ್, ಪೋನ್ ಪೇ ಮೂಲಕ ಹಾಕಿಸಿಕೊಂಡು ಮೋಸ ಮಾಡಿದ್ದಾರೆ.





































