ಕಾರ್ಕಳ : ಜೇಸಿಐ ಕಾರ್ಕಳ ವತಿಯಿಂದ ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಇಂತಹ ಕಾರ್ಯಕ್ರಮಗಳು ಮುಂದುವರಿಯುತ್ತಿರಲಿ ಎಂದು ಜೇಸಿಐ ವಲಯ ಉಪಾಧ್ಯಕ್ಷ ಸಿ.ಎ. ಅನ್ವೇಶ್ ಶೆಟ್ಟಿ ಹೇಳಿದರು.
ಅವರು ಜು. 1ರಂದು ಜೇಸಿಐ ಕಾರ್ಕಳ ವತಿಯಿಂದ ಜೇಸಿಐ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಕುಟುಂಬ ಸಮ್ಮಿಲನ – ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸನ್ಮಾನ
ವೈದ್ಯಕೀಯ ಸೇವೆಗಾಗಿ ಡಾ. ಕೆ. ಆರ್. ಜೋಶಿ ಹಾಗೂ 61 ಬಾರಿ ರಕ್ತದಾನ ಮಾಡಿರುವ ನಿರಂಜನ್ ಜೈನ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜೇಸಿಐ ಕಾರ್ಕಳ ಹಾಗೂ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ 4 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂಪಾಯಿಯಂತೆ ವಿದ್ಯಾರ್ಥಿವೇತನ ನೀಡಲಾಯಿತು. ಅವಿನಾಶ್ ಶೆಟ್ಟಿ ಚೆಕ್ ಹಸ್ತಾಂತರಿಸಿದರು.

ಪೂರ್ವ ವಲಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಕಾರ್ಯಕ್ರಮ ಪ್ರಾಯೋಜಕ ಸುಂದರ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೂರ್ವ ವಲಯ ಅಧಿಕಾರಿ, ಪದಾಧಿಕಾರಿಗಳು, ವಲಯ ಅಧಿಕಾರಿಗಳು, ಪೂರ್ವ ವಲಯ ಉಪಾಧ್ಯಕ್ಷರು, ಲೇಡಿ ಜೇಸಿ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಜೇಸಿಐ ಕಾರ್ಕಳದ ಅಧ್ಯಕ್ಷೆ ಶ್ವೇತಾ ಎಸ್. ಜೈನ್, ಸ್ವಾಗತಿಸಿ, ಶಿವಕುಮಾರ್ ಜೆಸಿವಾಣಿ ವಾಚಿಸಿದರು. ಕಾರ್ಯದರ್ಶಿ ಸುಶ್ಮಿತಾ ವಂದಿಸಿದರು. ರೇವತಿ ಶೆಟ್ಟಿ ಸಹಕರಿಸಿದರು.






































