ಕಾರ್ಕಳ : ಮದುವೆ ವಿಚಾರವಾಗಿ ಮನೆಯವರೊಂದಿಗೆ ಭಿನ್ನಾಭಿಪ್ರಾಯವಿದ್ದುದರಿಂದ ಮನನೊಂದು ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ. 29ರಂದು ಸೂಡಾ ಗ್ರಾಮದದಲ್ಲಿ ನಡೆದಿದೆ. ಕುಮರೇಶ್ (24) ನೇಣಿಗೆ ಶರಣಾದವರು. ಮೂಲತ: ಚಾಮರಾಜನಗರ ಜಿಲ್ಲೆಯವರಾದ ಕುಮರೇಶ್ ಸೂಡಾ ಗ್ರಾಮದ ಓರಿಯೇಟರ್ ಕ್ರಷರ್‌ನಲ್ಲಿ ಟ್ರಾಕ್ಟರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಪತ್ನಿ ಕೀರ್ತನರೊಂದಿಗೆ ವಾಸವಿದ್ದರು. ಕುಮರೇಶ್ ಕೀರ್ತನ ಮದುವೆ ವಿಚಾರವಾಗಿ ಮನೆಯವರೊಂದಿಗೆ ಭಿನ್ನಾಭಿಪ್ರಾಯವಿತ್ತು. ಇದರಿಂದಲೇ ಮನನೊಂದು ಕುಮರೇಶ್ ತಾನು ವಾಸಿಸುತ್ತಿದ್ದ ಶೆಡ್ಡಿನ ಒಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಮರೇಶ್ ತಾಯಿಯ ತಮ್ಮ ನೀಡಿದ ಮಾಹಿತಿಯಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮದುವೆ ವಿಚಾರವಾಗಿ ಮನೆಯವರೊಂದಿಗೆ ಭಿನ್ನಾಭಿಪ್ರಾಯ – ವ್ಯಕ್ತಿ ನೇಣಿಗೆ ಶರಣು

































