ಕೂರತ್ ಉರೂಸ್ ಅನ್ನದಾನದ ವೇಳೆ ಜನದಟ್ಟಣೆ : ಮಹಿಳೆಯರು ಅಸ್ವಸ್ಥ

ಕಡಬ : ಕಡಬ ತಾಲೂಕು ಕುದ್ಮಾರು ಗ್ರಾಮದ ಕೂರತ್ ತಂಙಳ್ ಉರೂಸ್ ಕಾರ್ಯಕ್ರಮದ ಅನ್ನದಾನದ ವೇಳೆ ಜನದಟ್ಟಣೆಯಿಂದಾಗಿ ಹಲವರು ಗಾಯಗೊಂಡಿರುವ ಘಟನೆ ಜೂ. 29ರಂದು ಸಂಭವಿಸಿದೆ. ನಿರೀಕ್ಷೆಗೂ ಮೀರಿ ಉರೂಸ್‌ನಲ್ಲಿ ಜನಸಾಗರವೇ ಹರಿದು ಬಂತು. ಅನ್ನದಾನದ ವೇಳೆ ಸರತಿ ಸಾಲಿನಲ್ಲಿ ನಿಂತಿದ್ದ ಕೆಲವು ಮಹಿಳೆಯರು ಅಸ್ವಸ್ಥಗೊಂಡು ಕೆಲ ಕಾಲ ಆಂತಕಕ್ಕೀಡು ಮಾಡಿತು.
ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳೆಯರ ಪೈಕಿ ಕೆಲವರು ಮೂರ್ಛೆ ತಪ್ಪಿ ಬಿದ್ದಿದ್ದು ಅವರಿಗೆ ಕೂಡಲೇ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅಸ್ವಸ್ಥಗೊಂಡವರ ಪೈಕಿ ಫಾಯಿಝ (18 ವ), ಹಸ್ನಾ(18 ವ), ಸಮ್ರೀನಾ (19 ವ) ಹಾಗೂ ಮೈಮೂನ (36 ವ) ಮೊದಲಾದವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಚಿಕಿತ್ಸೆ ಬಳಿಕ ಅವರೆಲ್ಲರೂ ಚೇತರಿಸಿಕೊಂಡಿದ್ದಾರೆ. ಆ ಬಳಿಕ ಮನೆಗೆ ತೆರಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನೂ 6 ಮಂದಿ ಅಸ್ವಸ್ಥಗೊಂಡಿದ್ದು ಅವರಿಗೆ ಸ್ಥಳದಲ್ಲಿದ್ದ ಆರೋಗ್ಯ ಸಹಾಯಕಿಯರು ಪ್ರಾಥಮಿಕ ಚಿಕಿತ್ಸೆ ನೀಡಿ ಉಪಚರಿಸಿದ್ದಾರೆ ಎಂದು ತಿಳಿದು ಬಂದಿದೆ.
ಉರೂಸ್ ಕಾರ್ಯಕ್ರಮಕ್ಕೆ ಬಂದಿದ್ದ ಆಸಿಯಮ್ಮ(70 ವ) ಎಂಬವರು ಉರೂಸ್ ಕಾರ್ಯಕ್ರಮ ನಡೆಯುವ ಸ್ಥಳದಿಂದ ಅಲ್ಪ ದೂರದಲ್ಲಿ ಮೂರ್ಛೆ ತಪ್ಪಿ ಬಿದ್ದಿದ್ದು ಅವರನ್ನು ಕೂಡಲೇ ಆಂಬುಲೆನ್ಸ್ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.









































































































error: Content is protected !!
Scroll to Top